ಮಾರ್ಚ್ ತಿಂಗಳು ಅಂತ್ಯಕ್ಕೆ ಇನ್ನು ಕೇವಲ 9 ದಿನಗಳು ಉಳಿದಿದ್ದು, ನಂತರ ಏಪ್ರಿಲ್ ಅಂದರೆ ಹೊಸ ಆರ್ಥಿಕ ವರ್ಷವು ಪ್ರಾರಂಭವಾಗಲಿದ್ದು, ಇದರೊಂದಿಗೆ, ಏಪ್ರಿಲ್ ತಿಂಗಳಲ್ಲಿ ಅನೇಕ ದಿನ ಬ್ಯಾಂಕ್ ರಜೆ ಇರಲಿದೆ.
ಹೌದು, ಯುಗಾದಿ, ಅಂಬೇಡ್ಕರ್ ಜಯಂತಿ, ಹೀಗೆ ಏಪ್ರಿಲ್‌ನಲ್ಲಿ ಒಟ್ಟು 15 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ ಎಂದು, ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಆರ್‌ಬಿಐನ ಈ ಪಟ್ಟಿಯ ಪ್ರಕಾರ ಏಪ್ರಿಲ್ ತಿಂಗಳಲ್ಲಿ ವಾರದ ರಜೆ ಸೇರಿದಂತೆ ಒಟ್ಟು 15 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಈ ರಜೆಗಳು ಬೇರೆ ರಾಜ್ಯಳಿಗೆ ಅನುಸಾರವಾಗಿ ಬದಲಾಗುತ್ತವೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.