ಸಿಡ್ನಿ: ಸಿಡ್ನಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಡಿಯಾ ನಡುವಿನ ಎರಡನೇ ಪಂದ್ಯದಲ್ಲಿ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ತಂಡ 51 ರನ್ ಗಳ ಗೆಲವು ದಾಖಲಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.
ಆಸ್ಟ್ರೇಲಿಯಾ ತಂಡ ನೀಡಿದ್ದ 390 ರನ್ ಗಳ ಗೆಲುವಿನ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಡಿಯಾ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 338 ರನ್ ಗಳಿಸಿ 51 ರನ್ ಗಳಿಂದ ಸೋಲಿಗೆ ಶರಣಾಯಿತು. ಇಂಡಿಯಾ ಪರ ಶಿಖರ್ ದವನ್ -30, ಮಾಯಾಂಕ್ ಅಗರವಾಲ್ – 28, ವಿರಾಟ್ ಕೊಹ್ಲಿ -89, ಶ್ರೇಯಸ್ ಅಯ್ಯರ್ – 38, ಕೆ ಎಲ್ ರಾಹುಲ್- 76, ಹಾರ್ದಿಕ್ ಪಾಂಡ್ಯ – 28 ಹಾಗು ರವೀಂದ್ರ ಜಡೇಜಾ-24 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮ್ಮಿನ್ಸ್- 3, ಹೆಜೆಲ್ ವುಡ್-2, ಆಡಮ್ ಜಂಪಾ-2, ಹೆನ್ರಿಕಸ್ ಹಾಗು ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 389 ರನ್ ಗಳನ್ನು ಗಳಿಸಿತು. ಆಸ್ಟ್ರೇಲಿಯಾ ಪರ ನಾಯಕ ಅರೋನ್ ಫಿಂಚ್-60, ಡೇವಿಡ್ ವಾರ್ನರ್-83, ಸ್ಟಿವನ್ ಸ್ಮಿತ್-104, ಮಾರ್ನಸ್ ಲಾಭುಶಾನೆ-70, ಹಾಗು ಗ್ಲೇನ್ ಮ್ಯಾಕ್ಸ್ ವೆಲ್-63* ರನ್ ಗಳಿಸಿದರು. ಇಂಡಿಯಾ ಪರ ಮಹಮದ್ ಶಮಿ, ಬುಮ್ರಾ ಹಾಗು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಪರ ಅಮೋಘ ಶತಕ ಸಿಡಿಸಿದ ಸ್ಟಿವನ್ ಸ್ಮಿತ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.