ಲೋಕಸಭೆ ಚುನಾವಣೆ ವೇಳೆ ಹೆಣ್ಣು ಎಂಬ ಕನಿಕರ ತೋರದೆ ವಿರೋಧಿಗಳು ಏನೇನು ಮಾಡಿದರು ಜನ ನೋಡಿದ್ದಾರೆ. ಅಕ್ರಮ ಗಣಿಗಾರಿಕೆ ವಿಷಯದಲ್ಲಿ ನನ್ನ ಮೇಲೆ ಹಲ್ಲೆಗೆ ಪ್ರಯತ್ನ ಮಾಡಿದ್ದರು. ಅವಾಚ್ಯ ಶಬ್ದದಿಂದ ನಿಂದಿಸಿದರು.
ಆದರೆ ಅವರ ಸ್ವಾರ್ಥಕ್ಕಾಗಿ ಮಾಡಿದ ಪ್ರಯತ್ನಕ್ಕೆ ನಾನು ಎಂದು ತಲೆ ಕೆಡಿಸಿಕೊಂಡಿಲ್ಲ. ಆದರೆ ನಾನು ಶ್ರಮ ಪಟ್ಟು ಎಲ್ಲವನ್ನೂ ತಡೆದುಕೊಂಡು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದೆ. ಜನರ ಮನಸ್ಸು ಗೆದ್ದು ಕೆಲಸ ಮಾಡಿದೆ ಎಂದು ಮಂಡ್ಯ ಸಂಸದೆ , ಹಿರಿಯ ನಟಿ ಸುಮಲತಾ ಅಂಬರೀಷ್ ಕಣ್ಣೀರು ಹಾಕಿದ್ದಾರೆ.
ಎರಡು ಬಾರಿ ಹಲ್ಲೆ ನಡೆಸಲು ಯತ್ನ: ಸುಮಲತಾ
ತಮ್ಮ ಮುಂದಿನ ರಾಜಕೀಯ ನಡೆಯನ್ನು ಬಹಿರಂಗಪಡಿಸಲು ಸಂಸದೆ ಸುಮಲತಾ ವಿಶೇಷ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎರಡು ಬಾರಿ ತನ್ನ ಮೇಲೆ ಹಲ್ಲೆಗೆ ಯತ್ನ ನಡೆಸಲಾಗಿತ್ತು ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ.
ಹೌದು. ಕೆ.ಆರ್.ನಗರದಲ್ಲಿ ಒಮ್ಮೆ ಹಾಗೂ ಶ್ರೀರಂಗಪಟ್ಟಣದಲ್ಲಿ ನನ್ನ ಮೇಲೆ ಹಲ್ಲೆಗೆ ಯತ್ನಿಸಲಾಗಿತ್ತು. ಆ ವೇಳೆ ನನ್ನ ಪರವಾಗಿ ಯಾರೂ ನಿಂತಿದ್ದರು ಎಂದು ಮಂಡ್ಯ ಸಂಸದೆ , ಹಿರಿಯ ನಟಿ ಸುಮಲತಾ ಅಂಬರೀಷ್ ಪ್ರಶ್ನಿಸಿದ್ದಾರೆ.