ಬೆಂಗಳೂರು: ಆರ್ ಆರ್ ನಗರ ಉಪಚುನಾವಣೆ ಅಭ್ಯರ್ಥಿ ಮುನಿರತ್ನ ಅವರು ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಡಿಸಿಎಂ ಅಶ್ವತ್ಥ ನಾರಾಯಣ ಇಂದು ಮಾತನಾಡಿದ್ದು, ಮುನಿರತ್ನ ಅವರನ್ನು ನಮ್ಮ ಪಕ್ಷಕ್ಕೆ ಯಾರು ಕಳುಹಿಸಿಕೊಟ್ಟರು ಎಂಬ ಬಗ್ಗೆ ನಮ್ಮ ಬಳಿ ಆಡಿಯೋ ಸಾಕ್ಷಿ ಇದ್ದು, ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮುನಿರತ್ನ ಅವರೂ ಸೇರಿ ಹಲವು ನಾಯಕರು ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ ನಿಂದ ಬಂದ ಯಾವೊಬ್ಬ ನಾಯಕರೂ ನಮ್ಮಿಂದ ಹಣ ಪಡೆದಿಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ಹೇಳಿದ್ದು, ಕಾಂಗ್ರೆಸ್ ಪಕ್ಷದ ಒಳ ಜಗಳಗಳಿಂದ ಮೈತ್ರಿ ಸರ್ಕಾರ ಪತನವಾಯಿತು. ಇದರಲ್ಲಿ ಬಿಜೆಪಿ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಅಶ್ವಥ್ ನಾರಾಯಣ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಮೀರ್ ಸಾದಿಕ್ ಗೆ ಹೋಲಿಸಿ ಮಾತನಾಡಿದ್ದರು. ನವಂಬರ್ 3 ರಂದು ಆರ್.ಆರ್.ನಗರ ಉಪ ಚುನಾವಣೆಗೆ ನಡೆಯಲಿದ್ದು ಮುನಿರತ್ನ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.