Ashoka University Scholarship | ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಹರಿಯಾಣದ ಪ್ರತಿಷ್ಠಿತ ಅಶೋಕ ವಿಶ್ವವಿದ್ಯಾಲಯ (Ashoka University) 2026ರ ಸಾಲಿನ ಪದವಿಪೂರ್ವ (Undergraduate) ಪ್ರವೇಶಾತಿಗಾಗಿ ಬೃಹತ್ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಕಟಿಸಿದೆ.
ಯಾರಿಗೆ ಸಿಗಲಿದೆ 100% ಶುಲ್ಕ ವಿನಾಯಿತಿ?
ವಿಶ್ವವಿದ್ಯಾಲಯವು ಘೋಷಿಸಿರುವ 50 ವಿಶೇಷ ‘ಮೆರಿಟ್ ಸ್ಕಾಲರ್‌ಶಿಪ್’ ಅಡಿಯಲ್ಲಿ ಈ ಕೆಳಗಿನ ಸಾಧಕರಿಗೆ ಪೂರ್ಣ ಪ್ರಮಾಣದ ಬೋಧನಾ ಶುಲ್ಕ ವಿನಾಯಿತಿ ಸಿಗಲಿದೆ:
- JEE Main: 98 ಪರ್ಸೆಂಟೈಲ್‌ಗಿಂತ ಹೆಚ್ಚು ಅಂಕ ಗಳಿಸಿದವರು.
- IAT (IISER): ಟಾಪ್ 2000 ರ‍್ಯಾಂಕ್ ಪಡೆದವರು.
- CMI: ಪ್ರವೇಶ ಪರೀಕ್ಷೆಯಲ್ಲಿ ಟಾಪ್ 100 ರ‍್ಯಾಂಕ್ ಪಡೆದವರು.
- Olympiads: ರಾಷ್ಟ್ರೀಯ ಮಟ್ಟದ ಒಲಿಂಪಿಯಾಡ್ ಟ್ರೈನಿಂಗ್ ಕ್ಯಾಂಪ್‌ಗೆ ಆಯ್ಕೆಯಾದವರು.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
ಅಶೋಕ ವಿಶ್ವವಿದ್ಯಾಲಯದ ಪ್ರವೇಶ ಪ್ರಕ್ರಿಯೆಯು ನಾಲ್ಕು ಸುತ್ತುಗಳಲ್ಲಿ ನಡೆಯಲಿದ್ದು, ಸದ್ಯ ಮೂರನೇ ಸುತ್ತಿನ (Round 3) ಅರ್ಜಿ ಸಲ್ಲಿಕೆ ಮುಕ್ತವಾಗಿದೆ.
- ಮೂರನೇ ಸುತ್ತಿನ ಕೊನೆಯ ದಿನಾಂಕ: ಏಪ್ರಿಲ್ 22, 2026
- ನಾಲ್ಕನೇ ಸುತ್ತಿನ ಕೊನೆಯ ದಿನಾಂಕ: ಮೇ 31, 2026
ಅರ್ಜಿ ಸಲ್ಲಿಕೆ ವಿಧಾನ:
ಆಸಕ್ತ ವಿದ್ಯಾರ್ಥಿಗಳು ಅಶೋಕ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಪ್ರತ್ಯೇಕ ವಿದ್ಯಾರ್ಥಿವೇತನ ಫಾರ್ಮ್ ಅನ್ನು ಪ್ರವೇಶಾತಿ ಪ್ರಕ್ರಿಯೆಯ ಸಮಯದಲ್ಲಿಯೇ ಭರ್ತಿ ಮಾಡಬೇಕಾಗುತ್ತದೆ.
ಇಂದೇ ಅರ್ಜಿ ಸಲ್ಲಿಸಿ (Official Link)
ಹೆಚ್ಚಿನ ಶೈಕ್ಷಣಿಕ ಮಾಹಿತಿಗಾಗಿ ವಿಜಯಪ್ರಭ ನ್ಯೂಸ್ ಫಾಲೋ ಮಾಡಿ.




