ದಾವಣಗೆರೆ : ಎರಡು ತಲೆ ಹಾವುಗಳನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ದಾವಣಗೆರೆ ನಗರದ ವಿಶೇಶ್ವರಯ್ಯ ಪಾರ್ಕ್ ಬಳಿ ಬಂಧಿಸಲಾಗಿದೆ.
ಬಂದಿತರು ಚನ್ನಗಿರಿಯ ಅಭಿಲಾಷ್, ಬಳ್ಳಾರಿಯ ಮುತ್ತಪ್ಪ, ಚಿತ್ರದುರ್ಗದ ಗಣೇಶ್, ಶಿವಮೊಗ್ಗದ ನಾಗರಾಜ್ ಹಾಗು ಗಾಣದಕಟ್ಟೆಯ ಎನ್ನಲಾಗಿದ್ದು ಆರೋಪಿಗಳಿಂದ ಎರಡು ತಲೆಯ ಮೂರು ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಎರಡು ತಲೆಯ ಹಾವುಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಲು ಯತ್ನಿಸಿದ್ದರು ಎನ್ನಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು ಐದು ಜನರನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.