Pradhan Mantri Surya Ghar Muft Bijli Scheme : ಕೇಂದ್ರ ಸರ್ಕಾರದಿಂದ 2024ರಲ್ಲಿ “ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ ಬಿಜ್ಜಿ ಯೋಜನೆ” ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಆರಂಭಿಸಲಾಯಿತು. ಇದರ ಅಡಿಯಲ್ಲಿ, ದೇಶದಾದ್ಯ೦ತ ಒ೦ದು ಕೋಟಿ ಮನೆಗಳಲ್ಲಿ ಸೌರ ಘಟಕಗಳನ್ನು ಅಳವಡಿಸುವ ಗುರಿ ಹೊಂದಲಾಗಿದ್ದು, ಈ ಯೋಜನೆ ಅಳವಡಿಸಿಕೊಂಡರೆ ಮನೆಮಂದಿಗೆ 20 ವರ್ಷಗಳ ಕಾಲ ಉಚಿತ ವಿದ್ಯುತ್ ಬಳಕೆಯ ಹಕ್ಕು ಸಿಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಸಬ್ಸಿಡಿ ಮತ್ತು ಉಳಿತಾಯ

ಸೌರ ಘಟಕ ಅಳವಡಿಸಲು ಮನೆಯ ಮೇಲ್ಟಾವಣಿಯಲ್ಲಿ ಪ್ರತಿ 1 ಕಿಲೋವಾಟ್ (KW) ಘಟಕಕ್ಕೆ 10×10 ಅಡಿ ಜಾಗ ಅಗತ್ಯ.
1 KW ಘಟಕ: ತಿಂಗಳಿಗೆ 100 ಯೂನಿಟ್ ಉತ್ಪಾದನೆಗೆ ಸಬ್ಸಿಡಿ: ₹30,000 ಸಿಗುತ್ತದೆ
2 KW ಘಟಕ: ತಿಂಗಳಿಗೆ 200 ಯೂನಿಟ್ ಉತ್ಪಾದನೆಗೆ ಸಬ್ಸಿಡಿ: ₹60,000 ಸಿಗುತ್ತದೆ
3 KW ಘಟಕ: ತಿಂಗಳಿಗೆ 300 ಯೂನಿಟ್ ಉತ್ಪಾದನೆಗೆ ಸಬ್ಸಿಡಿ: ₹60,000 ಸಿಗುತ್ತದೆ
ಅರ್ಹತೆ
- ಖಾಸಗಿ ಮನೆಮಾಲೀಕರು (ಗ್ರಾಮ ಮತ್ತು ನಗರ ಪ್ರದೇಶ).
- ಅಪಾರ್ಟೆಂಟ್ / ವಸತಿ ಸಮೂಹಗಳ ಸಂಘಗಳು.
- ಚಾವಣಿಯಲ್ಲಿ ಖಾಲಿ ಸ್ಥಳವಿರುವವರು.
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಇತ್ತೀಚಿನ ವಿದ್ಯುತ್ ಬಿಲ್
- ಬ್ಯಾಂಕ್ ಪಾಸ್‌ಬುಕ್ ಪ್ರತಿಗೆ
- ಚಾವಣಿಯ ಮೇಲಿನ ಸ್ಥಳದ ಫೋಟೋ
ಅರ್ಜಿ ಸಲ್ಲಿಕೆ
- ಮೊದಲಿಗೆ ಅಧಿಕೃತ ವೆಬ್‌ಸೈಟ್ pm suryaghar.gov.in ಗೆ ಭೇಟಿ ನೀಡಿ.
- Apply for Rooftop ಸೋಲಾರ್ ಆಯ್ಕೆ ಮಾಡಿ.
- ನಂತರ ನಿಮ್ಮ ರಾಜ್ಯ, ವಿದ್ಯುತ್ ಪೂರೈಕೆ ಕಂಪನಿ (~: BESCOM, MESCOM, HESCOM) ಆಯ್ಕೆ ಮಾಡಿ.
- ನಂತರ ಗ್ರಾಹಕ ಐಡಿ ನಮೂದಿಸಿ ವಿವರಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿಯನ್ನು ಸಲ್ಲಿಸಿದ ನಂತರ Application ID ಪಡೆಯಿರಿ.
ನೋಂದಣಿ ನಂತರ
- ಸಂಬ೦ಧಿಸಿದ DISCOM ಅಧಿಕಾರಿಗಳು ತಾಂತ್ರಿಕ ಪರಿಶೀಲನೆ ನಡೆಸುತ್ತಾರೆ.
- ಅನುಮೋದನೆ ಬಳಿಕ ಮಾನ್ಯ ಏಜೆನ್ಸಿ ಮೂಲಕ ಸೌರ ಘಟಕ ಅಳವಡಿಸಲಾಗುತ್ತದೆ.
- ಸರ್ಕಾರ ನೀಡುವ ಸಬ್ಸಿಡಿ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.



