Ujjwala Yojana | ಬಿಪಿಎಲ್ ಕುಟುಂಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್, 300 ರೂ. ನೆರವು; ಅರ್ಜಿ ಆಹ್ವಾನ

Ujjwala Yojana | ಗ್ರಾಮೀಣ ಮತ್ತು ನಗರ ಬಡ ಮಹಿಳೆಯರಿಗೆ ಸುರಕ್ಷಿತ ಅಡುಗೆ ಇಂಧನ ಒದಗಿಸಲು ಕೇಂದ್ರ ಸರ್ಕಾರವು ಉಜ್ವಲ ಯೋಜನೆಯನ್ನು ನವೀಕೃತ ರೂಪದಲ್ಲಿ ಜಾರಿಗೆ ತಂದಿದೆ. ಈ ಮೂಲಕ ಉಚಿತ ಎಲ್‌ಪಿಜಿ ಸಂಪರ್ಕ…

Ujjwala Yojana

Ujjwala Yojana | ಗ್ರಾಮೀಣ ಮತ್ತು ನಗರ ಬಡ ಮಹಿಳೆಯರಿಗೆ ಸುರಕ್ಷಿತ ಅಡುಗೆ ಇಂಧನ ಒದಗಿಸಲು ಕೇಂದ್ರ ಸರ್ಕಾರವು ಉಜ್ವಲ ಯೋಜನೆಯನ್ನು ನವೀಕೃತ ರೂಪದಲ್ಲಿ ಜಾರಿಗೆ ತಂದಿದೆ. ಈ ಮೂಲಕ ಉಚಿತ ಎಲ್‌ಪಿಜಿ ಸಂಪರ್ಕ ಪಡೆಯಲು ಬಡ ಕುಟುಂಬಗಳಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಈವರೆಗೆ 10 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ನೀಡಿದೆ. 1 ಮೇ 2016ರಂದು ಪ್ರಧಾನಿ ಮೋದಿಯವರಿಂದ ಶುರುವಾದ ಈ ಯೋಜನೆ, ಗ್ರಾಮೀಣ ಮತ್ತು ನಗರದ ಬಡ ಮಹಿಳೆಯರಿಗೆ ಸುರಕ್ಷಿತ ಅಡುಗೆ ಇಂಧನವನ್ನು ಒದಗಿಸುವ ಗುರಿ ಹೊಂದಿದೆ.

ಪ್ರಸ್ತುತ ಸಬ್ಸಿಡಿ ಹೊಂದಿರುವ ಸಿಲಿಂಡರ್ ಬೆಲೆ 550 ರೂ. ಇದರಲ್ಲಿ 200 ರೂ. ರಿಯಾಯಿತಿ ನೀಡಲಾಗುತ್ತಿದೆ. ಜೊತೆಗೆ ಸರ್ಕಾರವು 300 ರೂ. ನೇರ ಹಣ ಸಹಾಯ ನೀಡುತ್ತಿದೆ. ಇದೀಗ ಈ ಯೋಜನೆಗೆ ಅರ್ಹತೆ ಹೊಂದಿದವರಿಗೆ ತಕ್ಷಣ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಅಧಿಕೃತ ವೆಬ್ಸೈಟ್: https://www.pmuy.gov.in/ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಅರ್ಜಿಯನ್ನೂ ಅಲ್ಲೇ ಸಲ್ಲಿಸಬಹುದು.

Vijayaprabha Mobile App free

ಉಜ್ವಲ ಯೋಜನೆಯ ಲಾಭ

  • 10.33 ಕೋಟಿ ಜನರು ಈ ಯೋಜನೆಯಿಂದ ಲಾಭ ಪಡೆದಿದ್ದಾರೆ.
  • ಸುಮಾರು 32.94 ಕೋಟಿ ಎಲ್‌ಪಿಜಿ ಗ್ರಾಹಕರಲ್ಲಿ 31% ಉಜ್ವಲ ಯೋಜನೆಯಡಿಯಲ್ಲಿ ಸೇರ್ಪಡೆ.
  • ಪ್ರಸ್ತುತ ಸಬ್ಸಿಡಿ ಸಿಲಿಂಡರ್ ಬೆಲೆ ₹550 (ಸಾಮಾನ್ಯ ಬೆಲೆಗಿಂತ ₹200 ರಿಯಾಯಿತಿ) ಇದೆ.
  • ಪ್ರತಿ ಫಲಾನುಭವಿಗೆ ₹300 ನೇರ ಬೆಂಬಲ (DBT ಮೂಲಕ).

ಯೋಜನೆಗೆ ಯಾರು ಅರ್ಹರು?

  • ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳ ಮಹಿಳೆಯರು.
  • SC/ST, OBC, ಅತ್ಯಂತ ಹಿಂದುಳಿದ ವರ್ಗ, PMAY (ಗ್ರಾಮೀಣ).
  • ವಯಸ್ಸು 18 ವರ್ಷಕ್ಕಿಂತ ಹೆಚ್ಚು ಇರಬೇಕು.
  • ಆದಾಯ ತೆರಿಗೆ ದಾರರಾಗಿರಬಾರದು.
  • ಈಗಾಗಲೇ ಎಲ್‌ಪಿಜಿ ಸಂಪರ್ಕ ಹೊಂದಿರುವವರಿಗೆ ಅರ್ಹತೆ ಇಲ್ಲ.

ಅರ್ಜಿಗೆ ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್ (ಅರ್ಜಿದಾರ & ಕುಟು೦ಬದ)
  • ಬ್ಯಾಂಕ್‌ ಖಾತೆ ವಿವರ (DBT ಮೂಲಕ ಸಹಾಯಧನ ಪಡೆಯಲು)
  • ಮೊಬೈಲ್‌ ನಂಬರ್‌ (OTP & ಅಪ್ಲೇಟ್‌ಗಳಿಗೆ)
  • ಪಾಸ್ ಪೋರ್ಟ್ ಗಾತ್ರದ ಫೋಟೋ

ಅರ್ಜಿ ಸಲ್ಲಿಕೆ ಹೇಗೆ?

  • https://pmuy.gov.in/ ಭೇಟಿ ನೀಡಿ
  • ಹೊಸ ಸಂಪರ್ಕಕ್ಕೆ ಅರ್ಜಿ ಆಯ್ಕೆ ಆರಿಸಿ
  • ನಿಮ್ಮ ಪ್ರದೇಶದ ಎಲ್ಪಿಜಿ ಡೀಲರ್ ಆಯ್ಕೆಮಾಡಿ.
  • ವೈಯಕ್ತಿಕ ಮಾಹಿತಿ, ಬ್ಯಾಂಕ್‌ ಖಾತೆ, ಆಧಾ‌ರ್ ಸಂಖ್ಯೆ ನಮೂದಿಸಿ
  • ದಾಖಲೆಗಳನ್ನು ಅಪ್ಲೋಡ್ ಮಾಡಿ & ಅರ್ಜಿ ಸಲ್ಲಿಸಿ.

ಆಫ್‌ಲೈನ್ ವಿಧಾನ

  • ನಿಮ್ಮ ನೆರೆಯ ಎಲ್‌ಪಿಜಿ ಡೀಲರ್ ಅಥವಾ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ.
  • ಉಜ್ವಲ ಯೋಜನೆ ಅರ್ಜಿ ಫಾರ್ಮ್ ಪಡೆದು, ದಾಖಲೆಗಳೊಂದಿಗೆ ಸಲ್ಲಿಸಿ.
  • ಯೋಜನೆ ಅಂಗೀಕರಿಸಿದರೆ, 15 ದಿನಗಳೊಳಗೆ ಸಿಲಿಂಡ‌ರ್ ಮನೆಗೆ ತಲುಪಿಸಲಾಗುತ್ತದೆ.

ಹೊಸ ಅರ್ಜಿದಾರರಿಗೆ ಸರ್ಕಾರದ ಎಚ್ಚರಿಕೆ

ಫ್ರಾಡ್ ತಡೆಗಟ್ಟಲು, ನಕಲಿ ದಾಖಲೆಗಳನ್ನು ಬಳಸಿ ಅರ್ಜಿ ಸಲ್ಲಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಸರ್ಕಾರ ಎಚ್ಚರಿಕೆ ನೀಡಿದ್ದು, ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ನಂಬರ್: 1800-266-6696, ಅಧಿಕೃತ ವೆಬ್ ಸೈಟ್ https://www.pmuy.gov.in/ ಗೆ ತಿಳಿಸಲು ಸೂಚಿಸಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.