ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಪರವಾನಗಿ ಭೂಮಾಪಕರುಗಳ ಕೊರತೆ ಇದ್ದು 3,000 ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದಂತೆ ಒಟ್ಟು 3 ಸಾವಿರ ಲ್ಯಾಂಡ್ ಸರ್ವೇಯರ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಜನವರಿ 21ರ ಸಂಜೆ 5 ಗಂಟೆ ಒಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಜಿ ಶುಲ್ಕ: ಅರ್ಜಿ ಶುಲ್ಕ ರೂ.1000 ಆಗಿದ್ದು, ಇಲಾಖಾ ವೆಬ್‌ಸೈಟ್ rdservices.karnataka.gov.in ನಲ್ಲಿ ಕ್ಲಿಕ್ ಮಾಡಿದಾಗ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಇರುತ್ತದೆ.
ವಿದ್ಯಾರ್ಹತೆ: ಕನಿಷ್ಠ ಪದವಿಪೂರ್ವ ಶಿಕ್ಷಣ(ಪಿಯುಸಿ) ಅಥವಾ ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಜರುಗಿಸುವ 12ನೇ ತರಗತಿ ಸಿಬಿಎಸ್‍ಸಿ ಅಥವಾ ಐಸಿಎಸ್‍ಇ ಇವುಗಳಲ್ಲಿ ವಿಜ್ಞಾನ ವಿಷಯ ಪಡೆದು ಗಣಿತ ವಿಷಯದಲ್ಲಿ ಶೇ.60 ಕ್ಕಿಂತ ಕಡಿಮೆ ಇಲ್ಲದೆಂತೆ ಅಂಕ ಪಡೆದು ಉತ್ತೀರ್ಣರಾಗಿರಬೇಕು. ಅಥವಾ ಕಾನೂನು ರೀತ್ಯಾ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಇ(ಸಿವಿಲ್)/ ಅಥವಾ ಬಿ.ಟೆಕ್(ಸಿವಿಲ್)/ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರುವವರೂ ಸಹ ಅರ್ಜಿ ಸಲ್ಲಿಸಬಹುದಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ಲ್ಯಾಂಡ್ ಅಂಡ್ ಸಿಟಿ ಸರ್ವೇಯಲ್ಲಿ ಪದವಿಪೂರ್ವ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರುಬೇಕು.
ವಯೋಮಿತಿ: ಅಭ್ಯರ್ಥಿಯ ವಯೋಮಿತಿ ಕನಿಷ್ಠ18 ವರ್ಷದಿಂದ ಗರಿಷ್ಠ 65 ವರ್ಷ ಮೀರಿರಬಾರದು.
ಜಿಲ್ಲಾವಾರು ಹುದ್ದೆಗಳು: ಬೆಂಗಳೂರು 65, ಬೆಂಗಳೂರು ಗ್ರಾಮಾಂತರ 12, ದಾವಣಗೆರ 183, ಬಳ್ಳಾರಿ 27, ವಿಜಯನಗರ 29, ಚಿತ್ರದುರ್ಗ 93, ಚಾಮರಾಜನಗರ 50, ತುಮಕೂರು 334, ದಕ್ಷಿಣ ಕನ್ನಡ 66, ಉಡುಪಿ 131, ಉತ್ತರಕನ್ನಡ 101, ಕೊಡಗು 100, ಕೊಪ್ಪಳ 66, ವಿಜಯಪುರ 76, ಬೆಳಗಾವಿ 112, ಕೋಲಾರ 137, ಗದಗ 46, ಕಲಬುರಗಿ 12, ಚಿಕ್ಕಬಳ್ಳಾಪುರ 39, ಚಿಕ್ಕಮಗಳೂರು 112, ಬಾಗಲಕೋಟೆ 60, ಬೀದರ್ 13, ಮಂಡ್ಯ 195, ಮೈಸೂರು 136, ಯಾದಗಿರಿ 45, ರಾಮನಗರ 155, ರಾಯಚೂರು 54, ಹಾವೇರಿ 299, ಹಾಸನ 136, ಶಿವಮೊಗ್ಗ 127 ಸೇರಿದಂತೆ ಒಟ್ಟು 3000 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದೆ.
ರಾಜ್ಯ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐಟಿಐ ಇನ್ ಸರ್ವೇ ಟ್ರೇಡ್‌ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರಿ ವಲಯಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷಗಳ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಗಿ ಪಡೆಯಲು ಅರ್ಹರಿರುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನ: https://landrecords.karnataka.gov.in/service201/ ಲಿಂಕ್ ಮೇಲೆ ಕ್ಲಿಕ್ ಮಾಡಿ. ಪಕ್ಕದಲ್ಲಿರುವ ಬಾಕ್ಸನಲ್ಲಿ ಅಭ್ಯರ್ಥಿಯ ಮೊಬೈಲ್ ನಂಬರ್ ನಮೂದಿಸಿ ಒಟಿಪಿ ಯನ್ನು ಪಡೆದುಕೊಂಡು ಲಾಗಿನ್ ಆಗಬೇಕು. ನಂತರ ಅಭ್ಯರ್ಥಿಯ ಮಾಹಿತಿ ತುಂಬಿ ಅರ್ಜಿ ಸಲ್ಲಿಸಬೇಕು.