ದಾವಣಗೆರೆ ಜ.29: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ದಾವಣಗೆರೆ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಮತ್ತು ಕಂದಾಯ ಇಲಾಖೆ ನೌಕರರ ಸಂಘ ದಾವಣಗೆರೆ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ತಾಶೀಲ್ದಾರ್ ಆದ ಪ್ರದೀಪ ಹಿರೇಮಠ ರವರ ಮೇಲೆ ನಡೆದ ಹಲ್ಲೆಯನ್ನು ತೀರ್ವವಾಗಿ ಖಂಡಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಪಾಲಾಕ್ಷಿ ಗ್ರಾಮಲೆಕ್ಕಾಧಿಕಾರಿಗಳ ರಾಜ್ಯ ಸಂಘದ ಖಜಾಂಚಿ ಗಳಾದ ಲೋಹಿತ್ ಕಂದಾಯ ಇಲಾಖೆ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಗಳಾದ ಗುರುಮೂರ್ತಿ ಖಜಾಂಚಿ ಗಳಾದ ಕಲ್ಲೇಶ್ವರ ರಾಜ್ಯ ಪರಿಷತ್ ಸದಸ್ಯರಾದ ರಂಗನಾಥ್ ಗೌರವಾಧ್ಯಕ್ಷರಾದ ಉಮೇಶ್ ಮತ್ತು ಪದಾಧಿಕಾರಿಗಳು ನಿರ್ದೇಶಕರು ಹಾಜರಿದ್ದರು