ವಿರಾಟ್‌ ಕೊಹ್ಲಿಗೆ ‘ಫ್ಲೈಯಿಂಗ್ ಕಿಸ್’ ಕೊಟ್ಟ ಅನುಷ್ಕಾ ಫೋಟೋ ವೈರಲ್

ದುಬೈ: ಕ್ರಿಕೆಟಿಗರ ಹೆಂಡತಿಯರು ಸ್ಟೇಡಿಯಂ ನಲ್ಲಿ ಕಂಡರೆ ಎಲ್ಲಾ ಕ್ಯಾಮೆರಾಗಳು ಅವರ ಮೇಲೆ ಇರುತ್ತವೆ. ಮುಖ್ಯವಾಗಿ ಆ ಆಟಗಾರ ಕ್ರೀಸ್‌ನಲ್ಲಿದ್ದರೆ, ಯಾವಾಗಲೂ ಒಂದು ಕ್ಯಾಮೆರಾ ಅವರ ಹೆಂಡತಿಯರ ಮೇಲೆ ಇರುತ್ತದೆ. ಚೈನ್ನೈ ಸೂಪರ್ ಕಿಂಗ್ಸ್…

virat anushka vijayaprabha

ದುಬೈ: ಕ್ರಿಕೆಟಿಗರ ಹೆಂಡತಿಯರು ಸ್ಟೇಡಿಯಂ ನಲ್ಲಿ ಕಂಡರೆ ಎಲ್ಲಾ ಕ್ಯಾಮೆರಾಗಳು ಅವರ ಮೇಲೆ ಇರುತ್ತವೆ. ಮುಖ್ಯವಾಗಿ ಆ ಆಟಗಾರ ಕ್ರೀಸ್‌ನಲ್ಲಿದ್ದರೆ, ಯಾವಾಗಲೂ ಒಂದು ಕ್ಯಾಮೆರಾ ಅವರ ಹೆಂಡತಿಯರ ಮೇಲೆ ಇರುತ್ತದೆ. ಚೈನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ವಿಶೇಷ ಆಕರ್ಷಣೆಯಾಗಿದ್ದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 90 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದರು.

ವಿರಾಟ್ ಕೊಹ್ಲಿ ತಮ್ಮ ಇನ್ನಿಂಗ್ಸ್ ನಂತರ ಪೆವಿಲಿಯನ್ ಕಡೆ ಬರುತ್ತಿರುವುದನ್ನು ನೋಡಿ ಅನುಷ್ಕಾ ಸಂತೋಷದಿಂದ ‘ಫ್ಲೈಯಿಂಗ್ ಕಿಸ್’ ನೀಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೊಹ್ಲಿಯ ಇನ್ನಿಂಗ್ಸ್‌ಗೆ ಅನುಷ್ಕಾ ಫ್ಲೈಯಿಂಗ್ ಕಿಸ್ ನೀಡುವ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಐಪಿಎಲ್ 2020 ರ ಋತುವಿನ ಆರಂಭದಲ್ಲಿ ವಿರಾಟ್ ಕೊಹ್ಲಿ ತಮ್ಮ ಆಟದ ಬಗ್ಗೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದಕ್ಕೆ ಕಾರಣ ಪತ್ನಿ ಅನುಷ್ಕಾ ಶರ್ಮ ಎಂದು ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಈಗ ಚೆನ್ನೈ ವಿರುದ್ಧ ಅದ್ಬುತ ಬ್ಯಾಟಿಂಗ್ ಮಾಡುವ ಮೂಲಕ ಕೊಹ್ಲಿ ಅವರು ಟೀಕಾಕಾರರಿಗೆ ಬ್ಯಾಟ್ ಮುಖಂತರವೇ ಉತ್ತರಿಸಿದ್ದಾರೆ .

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.