ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆಯ ಹೊಸ್ತಿಲಲ್ಲಿದ್ದು, ಇನ್ನು10 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್ ಗಳಲ್ಲಿ 7500 ರನ್ ಗಡಿ ದಾಟಿದ ಸಾಧನೆ ಮಾಡಲಿದ್ದಾರೆ.
ಹೌದು, ಮುಂಬರುವ ನ್ಯೂಜಿ ಲ್ಯಾಂಡ್ ವಿರುದ್ಧ ಡಬ್ಲ್ಯುಟಿಸಿ ಫೈನಲ್ ನಲ್ಲಿ ಇನ್ನು 10 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್ ಗಳಲ್ಲಿ 7500 ರನ್ ಗಳಿಸಿದ ಸಾಧನೆ ಮಾಡಲಿದ್ದು, ಸುನಿಲ್ ಗವಾಸ್ಕರ್ & ಮೊಹಮ್ಮದ್ ಯೂಸುಫ್ ಜೊತೆ ಜಂಟಿಯಾಗಿ ವಿಶ್ವದ 9ನೇ ಆಟಗಾರ & ಭಾರತದ 5ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ವಿರಾಟ್ ಕೊಹ್ಲಿ ಈವರೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ 153 ಇನ್ನಿಂಗ್ಸ್ ಗಳಿಂದ 7490 ರನ್ ಕಲೆ ಹಾಕಿದ್ದು, ಇದರಲ್ಲಿ 27 ಶತಕ ಹಾಗು 25 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇನ್ನು ಅತಿ ಕಡಿಮೆ(139) ಇನ್ನಿಂಗ್ಸ್ ಗಳಲ್ಲಿ 7500 ರನ್ ದಡಿ ದಾಟಿದ ಸಾಧನೆ ಮಾಡಿದ ದಾಖಲೆ ಆಸೀಸ್ ನ ಸ್ಟೀವನ್ ಸ್ಮಿತ್ ಹೆಸರಿನಲ್ಲಿದೆ.