Annabhagya food : ಇಡೀ ರಾಜ್ಯಕ್ಕೆ ಅನ್ನಭಾಗ್ಯ ಅಕ್ಕಿ ಪೂರೈಕೆ ಮಾಡುವ ಸಾವಿರಾರು ಲಾರಿ ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದು, ಆ ಮೂಲಕ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಹೌದು, ಸರ್ಕಾರದಿಂದ ₹260 ಕೋಟಿ ಬಾಕಿ ಸೇರಿದಂತೆ ಹಲವಾರು ಬೇಡಿಕೆಗಳು ಈಡೇರಿಸದ ಹಿನ್ನೆಲೆಯಲ್ಲಿ ಅವರು ಈ ತೀರ್ಮಾನ ಕೈಗೊಂಡಿದ್ದಾರೆ. ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣೆಯಲ್ಲಿ ಅಡಚಣೆ ಉಂಟಾಗುವ ಸಂಭವ ಇದೆ.
ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದರೂ, ಸರ್ಕಾರ ಕ್ರಮ ಕೈಗೊಂಡಿಲ್ಲವೆಂದು ಲಾರಿ ಮಾಲೀಕರು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಸುಮಾರು 4,000 ಲಾರಿಗಳು ಮುಷ್ಕರ ನಡೆಸುತ್ತಿವೆ. 4 ತಿಂಗಳಿಂದ ರಾಜ್ಯ ಸರ್ಕಾರ ಪಡಿತರ ಆಹಾರ ಧಾನ್ಯ ಸಾಗಣಿಕೆ ವೆಚ್ಚ ನೀಡಿಲ್ಲ. 250 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ




