ನವದೆಹಲಿ: TRP ಹಗರಣವು ಅನಿರೀಕ್ಷಿತವಾಗಿ ಮತ್ತೊಂದು ತಿರುವು ಪಡೆದುಕೊಂಡಿದ್ದು, ರಿಪಬ್ಲಿಕ್ ಟಿವಿ ಎಕ್ಸಿಕ್ಯೂಟಿವ್ ಎಡಿಟರ್ ಅರ್ನಾಬ್ ಗೋಸ್ವಾಮಿ ಮತ್ತು ಬಾರ್ಕ್ ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವಿನ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್ ಶಾಟ್‌ಗಳನ್ನು ವಕೀಲ ಪ್ರಶಾಂತ್ ಭೂಷಣ್ ಬಿಡುಗಡೆ ಮಾಡಿದ್ದಾರೆ. ಸ್ಕ್ರೀನ್ ಶಾಟ್‌ಗಳನ್ನು ಅಪ್ಲೋಡ್ ಮಾಡಿ, ಟ್ವೀಟ್ ಮಾಡಿರುವ ಪ್ರಶಾಂತ್ ಭೂಷಣ್, ಅರ್ನಾಬ್ ಗೋಸ್ವಾಮಿ ಅವರು ದೇಶದ ಕಾನೂನುಗಳ ಪ್ರಕಾರ ಜೈಲಿನಲ್ಲಿ ದೀರ್ಘಕಾಲ ಕಳೆಯಬೇಕಾಗುತ್ತದೆ ಎಂದು ಹೇಳಿದ್ದಾರೆ
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಟಿಆರ್‌ಪಿ ಹಗರಣ ಬೆಳಕಿಗೆ ಬಂದಿದ್ದು ತಿಳಿದ ವಿಚಾರ. ರಿಪಬ್ಲಿಕ್ ಟಿವಿ ಸೇರಿದಂತೆ ಹಲವಾರು ಟಿವಿ ಚಾನೆಲ್‌ಗಳು ಟಿಆರ್‌ಪಿ ರಿಗ್ಗಿಂಗ್‌ಗೆ ಬದ್ಧವಾಗಿವೆ ಎಂದು ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ಬಾರ್ಕ್ ದೂರಿದ ನಂತರ ಈ ಹಗರಣ ಬಯಲಿಗೆ ಬಂದಿತ್ತು.
ಪಾರ್ಥೋ ದಾಸ್‌ಗುಪ್ತಾ ಅವರು ಬಾರ್ಕ್ ಸಿಇಒ ಆಗಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅರ್ನಾಬ್ ಗೋಸ್ವಾಮಿ ಸೇರಿದಂತೆ ಇತರ ಆರೋಪಿಗಳು ಟಿಆರ್‌ಪಿ ರೇಟಿಂಗ್‌ಗಳನ್ನು ಬದಲಾಯಿಸಿದ್ದಾರೆ ಮತ್ತು ರಿಪಬ್ಲಿಕ್ ಟಿವಿಯನ್ನು ಉನ್ನತ ಸ್ಥಾನಕ್ಕೆ ತಲುಪಿಸಲು ಸಹಾಯ ಮಾಡಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. 2017 ರಲ್ಲಿ ರಿಪಬ್ಲಿಕ್ ಟಿವಿಯನ್ನು ಪ್ರಾರಂಭಿಸಿದಾಗ, ಅರ್ನಾಬ್ ತಮ್ಮ ಚಾನೆಲ್ ಟಿಆರ್‌ಪಿಯನ್ನು ರಿಗ್ಗಿಂಗ್ ಮಾಡಲು ಪಾರ್ಥ ದಾಸ್‌ಗುಪ್ತಾ ಅವರಿಗೆ ದೊಡ್ಡ ಮೊತ್ತವನ್ನು ಪಾವತಿಸಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ.
These are a few snapshots of the damning leaked WhatsApp chats between BARC CEO & #ArnabGoswami. They show many conspiracies&unprecedented access to power in this govt; gross abuse of his media&his position as power broker. In any Rule of law country, he would be in jail for long pic.twitter.com/6aGOR6BRQJ
— Prashant Bhushan (@pbhushan1) January 15, 2021