ಸಿದ್ದರಾಮಯ್ಯಗೆ ಉಡುಗೊರೆಗಳ ಮಹಾಪೂರ; ಸಿದ್ದರಾಮೋತ್ಸವ’ದಲ್ಲಿ ಸಿದ್ದು ಮಹತ್ವದ ಘೋಷಣೆ

ದಾವಣಗೆರೆ: ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಅದ್ದೂರಿ ನಡೆಯುತ್ತಿದ್ದು, ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ತಂದಿರುವ ವಿಶೇಷ ಉಡುಗೊರೆಗಳು ಗಮನ ಸೆಳೆದಿವೆ. ಸಿದ್ದು ಸಮುದಾಯದ ಸೂಚಕವಾಗಿ ಹಲವರು ಕುರಿಯನ್ನೇ ಉಡುಗೊರೆಯಾಗಿ ತಂದಿದ್ದು, ಗದೆ, ಬೆಳ್ಳಿಯ ಖಡ್ಗ, ಅಕ್ಕಿಯ ಪ್ರತಿಮೆ…

siddaramostava vijayaprabha news

ದಾವಣಗೆರೆ: ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಅದ್ದೂರಿ ನಡೆಯುತ್ತಿದ್ದು, ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ತಂದಿರುವ ವಿಶೇಷ ಉಡುಗೊರೆಗಳು ಗಮನ ಸೆಳೆದಿವೆ.

ಸಿದ್ದು ಸಮುದಾಯದ ಸೂಚಕವಾಗಿ ಹಲವರು ಕುರಿಯನ್ನೇ ಉಡುಗೊರೆಯಾಗಿ ತಂದಿದ್ದು, ಗದೆ, ಬೆಳ್ಳಿಯ ಖಡ್ಗ, ಅಕ್ಕಿಯ ಪ್ರತಿಮೆ ಸೇರಿದಂತೆ ಹಲವು ಉಡುಗೊರೆಗಳ ಸಮೇತ ಆಗಮಿಸಿದ್ದಾರೆ. ಲಕ್ಕಣ್ಣ ಎಂಬುವರು 1.5 ಕೆ.ಜಿ ತೂಕದ ಸಿದ್ದರಾಮಯ್ಯ ಅವರ ಬೆಳ್ಳಿ ಮೂರ್ತಿ ತಂದಿದ್ದು, ಅನೇಕರ ಎದೆಯ ಮೇಲೆ ಸಿದ್ದು ಅವರ ಹಚ್ಚೆ ರಾರಾಜಿಸುತ್ತಿದೆ.

ಸಿದ್ದರಾಮೋತ್ಸವ’ದಲ್ಲಿ ಸಿದ್ದು ಮಹತ್ವದ ಘೋಷಣೆ

Vijayaprabha Mobile App free

ಎಲ್ಲಿಯವರೆಗೆ ದೈಹಿಕ, ಮಾನಸಿಕವಾಗಿ ಸದೃಢವಾಗಿರುತ್ತೇನೋ ಅಲ್ಲಿಯವರೆಗೆ ಸಕ್ರಿಯ ರಾಜಕಾರಣದಲ್ಲಿರುತ್ತೇನೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಹೌದು, ದಾವಣಗೆರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜನರ ಆಶೀರ್ವಾದದಿಂದಲೇ ನಾನು ಶಾಸಕ, ಮಂತ್ರಿ, ಡಿಸಿಎಂ, ಸಿಎಂ ಆಗುವ ಅವಕಾಶ ಸಿಕ್ಕಿದೆ. ನಾಡಿನ ಜನತೆಗೆ ಧನ್ಯವಾದ ತಿಳಿಸುತ್ತೇನೆ. ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಶಕ್ತಿಯೇ ಪ್ರಮುಖ. ಜನರ ಆಶೀರ್ವಾದ ಇಲ್ಲದಿದ್ದರೆ ದೀರ್ಘಕಾಲ ರಾಜಕಾರಣ ಮಾಡಲಾಗಲ್ಲ ಎಂದು ಹೇಳಿದ್ದಾರೆ.

ನನ್ನ, ಡಿಕೆಶಿ ಮಧ್ಯೆ ಒಡಕಿಲ್ಲ: ಸಿದ್ದರಾಮಯ್ಯ

siddu-dk-vijayaprabha-news

ನನ್ನ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಟ್ಟಾಗಿದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಡಿಕೆಶಿ, ಸಿದ್ದು ನಡುವೆ ಬಿರುಕಿದೆ ಎಂದು ವಿಪಕ್ಷಗಳು & ಕೆಲ ಮಾಧ್ಯಮಗಳು ಜನರಿಗೆ ತಪ್ಪು ಮಾಹಿತಿ ನೀಡುತ್ತಿವೆ. ಇದು ವಿರೋಧಿಗಳ ಭ್ರಮೆ, ಮಾಧ್ಯಮಗಳ ಸೃಷ್ಟಿ ಅಷ್ಟೇ. ನಮ್ಮ ನಡುವೆ ಒಡಕಿಲ್ಲ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.