ಗುಜರಾತ್ ಮೂಲದ ಅಮುಲ್ ಕಂಪನಿಯು ತನ್ನ ಹಾಲಿನ ದರವನ್ನು ಮತ್ತೊಮ್ಮೆ ಹೆಚ್ಚಿಸಿದ್ದು, ಪೂರ್ಣ ಕೆನೆ ಹಾಲು ಈಗ ಲೀಟರ್‌ಗೆ 63 ರೂಯಿಂದ 66 ರೂಪಾಯಿಗೆ ಏರಿಕೆಯಾಗಿದೆ.
ಇನ್ನು, ಎಮ್ಮೆ ಹಾಲಿನ ದರ ಲೀಟರ್‌ಗೆ 5 ರೂಪಾಯಿ ಏರಿಕೆಯಾಗಿದ್ದು, 65 ರಿಂದ 70 ರೂಪಾಯಿ ಆಗಿದ್ದು, ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿದೆ ಎಂದು ಅಮುಲ್ ಸಂಸ್ಥೆ ತಿಳಿಸಿದೆ. ಇದಕ್ಕೂ ಮುನ್ನ ಗೋವರ್ಧನ್ ಬ್ರಾಂಡ್ ಪ್ರತಿ ಲೀಟರ್ ಹಾಲಿಗೆ 2 ರೂ ಹೆಚ್ಚಿಸಿತ್ತು.
ಪರಿಷ್ಕೃತಗೊಂಡ ದರವು ಅಮುಲ್ ತಾಝಾ 500 ಎಂಎಲ್ ಬೆಲೆ 27 ರೂ, 1 ಲೀ.ಗೆ ರೂ 54, 2 ಲೀಟರ್ ರೂ 108 ಮತ್ತು 6 ಲೀ.ಗೆ ರೂ 524 ಮಾಡಿ ದರ ಪರಷ್ಕರಿಸಿದ್ದೇವೆ ಎಂದು ಕಂಪನಿ ತಿಳಿಸಿದೆ. ಅಮುಲ್ ಪೌಚ್ ಮಿಲ್ಕ್‌ನ ಎಲ್ಲಾ ರೂಪಾಂತರಗಳ ಬೆಲೆ ಏರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.