Amrutha Swabhimani kurigahi Scheme : ಕೆಲವು ವರ್ಷಗಳ ಹಿಂದೆ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ಕುರಿ ಸಾಕಾಣಿಕೆ ಇ೦ದು ಲಾಭದಾಯಕ ಹಾಗೂ ವೃತ್ತಿಪರ ಉದ್ಯೋಗವಾಗಿ ರೂಪಾ೦ತರಗೊಂಡಿದೆ. ಹೆಚ್ಚುತ್ತಿರುವ ಯುವಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಜೀವನಮಟ್ಟ ಸುಧಾರಣೆ ಹಾಗೂ ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗಾಗಿ ಕರ್ನಾಟಕ ಸರ್ಕಾರ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯನ್ನು ಜಾರಿಗೆ ತ೦ದಿದ್ದು, ಈ ಯೋಜನೆಯು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಸುಸ್ಥಿರ ಜೀವನೋಪಾಯ ಒದಗಿಸುವ ಗುರಿ ಹೊಂದಿದೆ.
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ
ಪಶುಸಂಗೋಪನಾ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ, ಪ್ರತಿಯೊಬ್ಬ ಅರ್ಹ ಫಲಾನುಭವಿಗೆ 20 ಕುರಿ/ಮೇಕೆ ಹಾಗೂ 1 ಟಗರು ಅಥವಾ ಹೋತ ಒಳಗೊಂಡ (20+1) ಸಾಕಾಣಿಕಾ ಘಟಕವನ್ನು ನೀಡಲಾಗುತ್ತದೆ. ಒಂದು ಘಟಕದ ಒಟ್ಟು ವೆಚ್ಚವನ್ನು 1,75,000 ರೂ. ಎಂದು ನಿಗದಿಪಡಿಸಲಾಗಿದೆ. ಈ ಮೊತ್ತದಲ್ಲಿ -ಶೇ.50 (87,500 ರೂ.) ಎನ್ಸಿಡಿಸಿ (NCDC) ಮೂಲಕ ಸಾಲ ಶೇ.25 (43,750 ರೂ.) ರಾಜ್ಯ ಸರ್ಕಾರದ ಸಹಾಯಧನ ಶೇ.25 (43,750ರೂ.) ಫಲಾನುಭವಿಯ ವ೦ತಿಕೆ ಇರುತ್ತದೆ.
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯ ಉದ್ದೇಶ
ಗ್ರಾಮೀಣ ಭಾಗದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸಿ, ನಗರ ವಲಸೆ ತಡೆಯುವ ಉದ್ದೇಶದಿಂದ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ಮೂಲಕ ಮಾಂಸ ಹಾಗೂ ಉಣ್ಣೆ ಉತ್ಪಾದನೆ ಹೆಚ್ಚಿಸಿ, ಪಶುಸಂಗೋಪನಾ ವಲಯದ ಆರ್ಥಿಕ ಕೊಡುಗೆಯನ್ನು ವೃದ್ಧಿಸಲು ಸರ್ಕಾರವು ಘಟಕಗಳನ್ನು ಸ್ಥಾಪಿಸುತ್ತಿದೆ. ಪ್ರತಿ ಘಟಕದಲ್ಲಿ 20 ಹೆಣ್ಣು ಕುರಿ/ಮೇಕೆ ಮತ್ತು ಸಂತಾನೋತ್ಪತ್ತಿಗಾಗಿ 1 ಗಂಡು ಟಗರು/ಹೋತ ಇರಲಿದ್ದು, ಇದು ವೈಜ್ಞಾನಿಕವಾಗಿ ಲಾಭದಾಯಕವೆ೦ದು ಪರಿಗಣಿಸಲಾಗಿದೆ.
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯ ಅರ್ಹತಾ ಮಾನದಂಡ
ಕರ್ನಾಟಕದಲ್ಲಿ ಕುರಿ ಸಾಕಾಣಿಕೆಯನ್ನು ವೃತ್ತಿಯಾಗಿ ಮಾಡಿಕೊ೦ಡಿರುವವರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಕರ್ನಾಟಕದ ಖಾಯ೦ ನಿವಾಸಿಯಾಗಿರಬೇಕು, ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು ಮತ್ತು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾಗಿರಬೇಕು. ಪ್ರಮುಖ ಷರತ್ತುಗಳೆಂದರೆ, ಕನಿಷ್ಠ 1000 ಚದರ ಅಡಿ ಸ್ವಂತ ಜಾಗ ಇರಬೇಕು ಮತ್ತು ಒ೦ದು ಕುಟು೦ಬದಿ೦ದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಕಳೆದ 3 ವರ್ಷಗಳಲ್ಲಿ ಪಶುಸಂಗೋಪನಾ ಇಲಾಖೆಯಿ೦ದ ಯಾವುದೇ ಸಹಾಯಧನ ಪಡೆದಿರಬಾರದು. ನೋಂದಣಿಗಾಗಿ FRUITS ಪೋರ್ಟಲ್ನಲ್ಲಿ (fruits.karnataka.gov.in) & NeML ಫ್ಲಾಟ್ ಫಾರ್ಮ್ನಲ್ಲಿ ಮಾರಾಟಕ್ಕಾಗಿ ಹೆಸರು ನೋಂದಣಿ ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯು, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್ ಗಳನ್ನು ಸದಸ್ಯರನ್ನಾಗಿ ಒಳಗೊಂಡಿದ್ದು, ಆಸಕ್ತರಿಂದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಿದ್ದು, ಆಸಕ್ತರು ತಮ್ಮ ತಾಲ್ಲೂಕು ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಚೇರಿಗೆ ಭೇಟಿ ನೀಡಿ, ಅಧಿಕೃತ ಅರ್ಜಿ ನಮೂನೆಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.
ಬೇಕಾಗಿರುವ ಅಗತ್ಯ ದಾಖಲೆಗಳು
ರಾಜ್ಯಾದ್ಯಂತ ಪಶುಸಂಗೋಪನಾ ಯೋಜನೆ 2026ರ ಆರಂಭದ ವೇಳೆಗೆ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಕೆಲವು ಜಿಲ್ಲೆಗಳಲ್ಲಿ ಅನುದಾನ ಬಿಡುಗಡೆ ವಿಳಂಬವಾಗಿದ್ದರೂ, ಹೊಸ ಅರ್ಜಿ ಆಹ್ವಾನ ಮತ್ತು ಅನುದಾನದ ಲಭ್ಯತೆ ಕುರಿತು ರೈತರು ತಮ್ಮಜಿಲ್ಲಾ ಪಶುಸಂಗೋಪನಾ ಕಚೇರಿಯನ್ನು ಸಂಪರ್ಕಿಸಲು ಇಲಾಖೆ ತಿಳಿಸಿದೆ. ಆಧಾರ್ ಕಾರ್ಡ್, ಗುರುತಿನ ಚೀಟಿ, ಪಡಿತರ ಚೀಟಿ, ಬ್ಯಾಂಕ್ ಪಾಸ್ಬುಕ್, ಇತ್ತೀಚಿನ ಫೋಟೋ, ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ) ಮತ್ತು ಸಹಕಾರಿ ಸಂಘದ ಸದಸ್ಯತ್ವ ಪುರಾವೆ ಅಗತ್ಯ ದಾಖಲೆಗಳಾಗಿವೆ.




