ನವದೆಹಲಿ: ಅಮೇರಿಕ ಅಧ್ಯಕ್ಷಿಯ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಕುತೂಹಲಕ್ಕೆ ಕಾರಣವಾಗಿತ್ತು. ಇಡೀ ಜಗತ್ತಿನ ಗಮನ ಸೆಳೆದಿದ್ದ ಅಮೇರಿಕದ ಚುನಾವಣೆಯಲ್ಲಿ ಕೊನೆಗೂ ಡೆಮಕ್ರಟಿಕ್ ಪಕ್ಷದ ಜೋ ಬೈಡನ್ ಗೆದ್ದು ಬೀಗಿದ್ದಾರೆ.
ಆರಂಭದಲ್ಲಿ ಗೆಲುವು ನನ್ನದೇ ಎಂದು ಎದೆಟ್ಟಿಕೊಂಡು ಸಂಭ್ರಮಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಈ ಬಾರಿ ಅಧ್ಯಕ್ಷಿಯ ಚುನಾವಣೆಯಲ್ಲಿ ನ್ಯಾಯಯುತ ಮತ ಎಣಿಕೆ ನಡೆದಿಲ್ಲ. 71,000,000 ನ್ಯಾಯಯುತ ಮತಗಳು. ಹಾಲಿ ಅಧ್ಯಕ್ಷರಿಗೆ ಇದೇ ಮೊದಲಿಗೆ ಇಷ್ಟು ಮತಗಳು ಎಂದು ರಿಪಬ್ಲಿಕ್ ನ ಪಾರ್ಟಿಯ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ಇದಕ್ಕೆ ಹಲವರಿಂದ ಟೀಕೆ ಕೂಡ ವ್ಯಕ್ತವಾಗಿದೆ.
71,000,000 Legal Votes. The most EVER for a sitting President!
— Donald J. Trump (@realDonaldTrump) November 7, 2020
ಅಮೇರಿಕಾದ ಚುನಾವಣೆ ಇತಿಹಾಸದಲ್ಲೇ ಮತ ಎಣಿಕೆ ವೇಳೆ ಅಕ್ರಮ ನಡೆದಿಲ್ಲ ಎಂದು ಚುನಾವಣೆ ತಜ್ಞರು ಕೂಡ ತಿಳಿಸಿದ್ದಾರೆ.
ಆರಂಭದದಿಂದಲೂ ಜೋ ಬೈಡನ್ ಹಾಗೂ ಕಮಲಾ ಹ್ಯಾರೀಸ್ ಪರವಾಗಿ ಹೆಚ್ಚು ಪರಿಣಾಮಕಾರಿಯಾಗಿ ಚುನಾವಣೆ ಪ್ರಚಾರ ಮಾಡಿಕೊಂಡು ಬಂದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭಕೋರಿದ್ದಾರೆ.
Congratulations to my friends, @JoeBiden and @KamalaHarris — our next President and Vice President of the United States. pic.twitter.com/febgqxUi1y
— Barack Obama (@BarackObama) November 7, 2020