ವಿಜಯನಗರ: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಸಂತ್ರಸ್ತ ಕುಟುಂಬದ 9 ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹೌದು, ಜಾಗ ಒತ್ತುವರಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಹೊಸಪೇಟೆಯ ವಾರ್ಡ್ ನಂಬರ್ 6ರ ನಿವಾಸಿಗಳಾದ ದನಸೂರಿ ಪೋಲಪ್ಪ ಕುಟುಂಬಸ್ಥರಿಗೆ ಸ್ಥಳೀಯ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಧಮ್ಮಿ ಹಾಕಿದ್ದರಂತೆ.
ಈ ಹಿನ್ನೆಲೆಯಲ್ಲಿ ನೊಂದ ಕುಟುಂಬ ಹೊಸಪೇಟೆಯ ಎಸ್‌ಪಿ ಕಚೇರಿ ಎದುರು ಡಿ.ಪೋಲಪ್ಪ ಎಂಬುವವರ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದೆ. ಅದೃಷ್ಟವಶಾತ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಕುಟುಂಬಸ್ಥರನ್ನು ಪೊಲೀಸರು ತಡೆದಿದ್ದಾರೆ. ಕೆಲವರಿಗೆ ಸಣ್ಣ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.