ನವದೆಹಲಿ: ಜೂನ್ 1 ರಿಂದ ದೇಶೀಯ ವಿಮಾನಯಾನ ಪ್ರಯಾಣ ದರವನ್ನು ಶೇ.13ರಿಂದ 16ರವರೆಗೆ ಏರಿಕೆ ಮಾಡಿ ನಾಗರಿಕ ವಿಮಾನಯಾನ ಪ್ರಾಧಿಕಾರ ಆದೇಶ ಹೊರಡಿಸಿದೆ.
ಹೌದು, 40 ನಿಮಿಷದ ಪ್ರಯಾಣ ದರ 2300 ರೂ.ನಿಂದ 2600 ರೂ.ಗೆ, 40ರಿಂದ 60 ನಿಮಿಷಕ್ಕೆ 2900 ರೂ.ನಿಂದ 3300 ರೂ.ಗೆ ಏರಿಕೆ ಮಾಡಲಾಗಿದ್ದು, 60 ರಿಂದ 210 ನಿಮಿಷಕ್ಕೆ 3500ರಿಂದ 7600 ರೂ. ವರೆಗೆ ನಿಗದಿ ಮಾಡಲಾಗಿದೆ.
ಇನ್ನು, ವಿಮಾನಗಳಲ್ಲಿ ಒಟ್ಟು ಸಾಮರ್ಥ್ಯದ ಶೇ. 50 ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಬಹುದಾಗಿದ್ದು, ಕೊರೊನಾ ಎರಡನೇ ಅಲೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಶೇ. 50 ರಷ್ಟು ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶವಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




