Agriculture fair in Bengaluru | ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಇಂದಿನಿಂದ 16 ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ‘ಸಮೃದ್ಧ ಕೃಷಿ ವಿಕಸಿತ ಭಾರತ- ನೆಲ, ಜಲ, ಬೆಳೆ’ ಎಂಬ ಘೋಷವಾಕ್ಯದಡಿ ಕೃಷಿ ಮೇಳವನ್ನು ಆಯೋಜಿಸುತ್ತಿದೆ.
ಈ ಬಾರಿ ಕೃಷಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ಗ್ರಾಮೀಣ ಕೃಷಿ ಪದ್ಧತಿ, ಕಲೆ, ಸಂಸ್ಕೃತಿ, ಆಹಾರ ಮತ್ತು ಉಡುಗೆ-ತೊಡಿಗೆಗಳನ್ನು ನಗರವಾಸಿಗಳಿಗೆ ಪರಿಚಯಿಸಲಾಗುವುದು. ಪ್ರವಾಸಿಗರನ್ನು ಕೃಷಿಭೂಮಿಗೆ ಕರೆತಂದು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡುವ ಉದ್ದೇಶ ಹೊಂದಿದೆ.
ಮೇಳದಲ್ಲಿ 700ಕ್ಕೂ ಹೆಚ್ಚು ಮಳಿಗೆಗಳಿದ್ದು, ರೈತರಿಗೆ ಉಚಿತ ಸಾರಿಗೆ, ಪ್ರತ್ಯೇಕ ವಾಹನ ನಿಲುಗಡೆ ಮತ್ತು ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ರಾಜ್ಯಪಾಲರಿಂದ ಕೃಷಿ ಮೇಳಕ್ಕೆ ಚಾಲನೆ: ನಾಲ್ಕು ಹೊಸ ತಳಿಗಳ ಬಿಡುಗಡೆ

ಇನ್ನು, ಬೆಂಗಳೂರಿನಲ್ಲಿ ಇಂದು ಸಮೃದ್ಧ ಕೃಷಿಯಿಂದ ವಿಕಸಿತ ಭಾರತ ಸಂವಾದ’ ಕೃಷಿ ಮೇಳವನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಉದ್ಘಾಟಿಸಲಿದ್ದಾರೆ.
ಈ ಮೇಳದಲ್ಲಿ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ ಧಾನ್ಯ ಜೋಳ, ಕಪ್ಪು ಅರಿಶಿಣ, ಸೂರ್ಯಕಾಂತಿ ಮತ್ತು ಹರಳು ಬೆಳೆಯಲ್ಲಿ ತಲಾ ಎರಡು ಸಂಕರಣ ತಳಿಗಳನ್ನು ಬಿಡುಗಡೆ ಮಾಡಲಾಗುವುದು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಶಾಸಕ ಶರತ್ ಬಚ್ಚೇಗೌಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.




