ಹನಿಮೂನ್ ಸ್ಟೋರಿ; ಮದುವೆಯಾದ 10 ದಿನದಲ್ಲಿ ಪತಿ ವಿರುದ್ಧ ಕೇಸ್ ದಾಖಲಿಸಿದ ಹಾಟ್ ಬ್ಯುಟಿ; ಪತಿ ಬಂಧನ…!

ಗೋವಾ: ಬಾಲಿವುಡ್ ಹಾಟ್ ಬ್ಯೂಟಿ ಮತ್ತು ಇಂಟರ್ನೆಟ್ ತಾರೆ  ನಟಿ ಪೂನಂ ಪಾಂಡೆ ಅವರ ಪತಿ ಸ್ಯಾಮ್ ಬಾಂಬೆ ಅವರನ್ನು ಗೋವಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಸ್ಯಾಮ್ ತನ್ನ ಮೇಲೆ ಕಿರುಕುಳ, ಚಿತ್ರಹಿಂಸೆ ಮತ್ತು…

ಗೋವಾ: ಬಾಲಿವುಡ್ ಹಾಟ್ ಬ್ಯೂಟಿ ಮತ್ತು ಇಂಟರ್ನೆಟ್ ತಾರೆ  ನಟಿ ಪೂನಂ ಪಾಂಡೆ ಅವರ ಪತಿ ಸ್ಯಾಮ್ ಬಾಂಬೆ ಅವರನ್ನು ಗೋವಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಸ್ಯಾಮ್ ತನ್ನ ಮೇಲೆ ಕಿರುಕುಳ, ಚಿತ್ರಹಿಂಸೆ ಮತ್ತು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಪೂನಂ ಪಾಂಡೆ ಸೋಮವಾರ ರಾತ್ರಿ ಪೊಲೀಸರಿಗೆ ದೂರು ನೀಡಿದ್ಧು, ದಕ್ಷಿಣ ಗೋವಾದ ಕನಕೋನಾದಲ್ಲಿ ಸ್ಯಾಮ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಪೂನಂ ಪಾಂಡೆ ಅವರು ಅಲ್ಲಿ ಗೋವಾದಲ್ಲಿ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಪತಿ ಸ್ಯಾಮ್ ಬಾಂಬೆ ತನಗೆ ಬೆದರಿಕೆ ಹಾಕಿದ್ದಲ್ಲದೆ, ತನ್ನ ಮೇಲೆ ಹಲ್ಲೆ ಮತ್ತು ಕಿರುಕುಳ ನೀಡಿದ್ದಾನೆ ಎಂದು ಪೂನಂ ಪಾಂಡೆ ಸೋಮವಾರ ಮಧ್ಯರಾತ್ರಿ ದೂರು ನೀಡಿದ್ದು, ಸ್ಯಾಮ್ ಅವರನ್ನು ಬಂಧಿಸಲಾಗಿದೆ “ಎಂದು ಕನಕೋನ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತುಕಾರಂ ಚವಾಣ್ ತಿಳಿಸಿದ್ದಾರೆ. ಕಿರುಕುಳಕ್ಕೊಳಗಾದ ಸಂತ್ರಸ್ತೆ ನಟಿ ಪೂನಂ ಪಾಂಡೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

Vijayaprabha Mobile App free

ಮತ್ತೊಂದೆಡೆ, ಪೂನಮ್ ಅವರೊಂದಿಗೆ ತೆಗೆದ ಎಲ್ಲಾ ಫೋಟೋಗಳನ್ನು ಸ್ಯಾಮ್ ಬಾಂಬೆ ತನ್ನ ಇನ್ಸ್ಟಾಗ್ರಾಮ್ ನಿಂದ ತೆಗೆದುಹಾಕಿದ್ದು, ಅವರಿಬ್ಬರ ನಡುವೆ ಏನೋ ಬಿನ್ನಾಭಿಪ್ರಾಯ ಉಂಟಾಗಿದೆ ಎಂದು ತಿಳಿದು ಬರುತ್ತಿದೆ.

ಪೂನಂ ಪಾಂಡೆ ಮತ್ತು ಸ್ಯಾಮ್ ಬಾಂಬೆ ಹತ್ತು ದಿನಗಳ ಹಿಂದೆ ವಿವಾಹವಾದರು. ತಮ್ಮ ಪತಿಯೊಂದಿಗೆ ತಮ್ಮ ಮದುವೆಯ ಫೋಟೋಗಳನ್ನು ನಟಿ ಪೂನಂ ಪಾಂಡೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

ಗೋವಾದಲ್ಲಿ ಹನಿಮೂನ್ ಗೆ ಹೋದ ಫೋಟೋಗಳನ್ನು ಸಹ ಹಂಚಿಕೊಂಡಿದ್ದರು. ಗೋವಾದಲ್ಲಿ ಒಂದು ಕಡೆ ಶೂಟಿಂಗ್ ಮಾಡುತ್ತ, ಮತ್ತೊಂದು ಕಡೆ ಪೂನಂ ಪಾಂಡೆ ತನ್ನ ಪತಿಯೊಂದಿಗೆ ಹನಿಮೂನ್ ಮಾಡಿಕೊಳ್ಳುತ್ತಿದ್ದಾರೆ ಎಂದು ಎಲ್ಲರು ತಿಳಿದುಕೊಂಡಿದ್ದರು.

ಆದರೆ, ಅಲ್ಲಿ ಇಬ್ಬರ ನಡುವೆ ಏನೋ ನಡೆದಿದೆ. ಸ್ಯಾಮ್ ಬಾಂಬೆ ಅವರು ಪೂನಂ ಪಾಂಡೆಗೆ ಕಿರುಕುಳ ನೀಡಲು ಕಾರಣವೇನು .. ಅಲ್ಲಿ ನಿಜವಾಗಿ ಏನಾಯಿತು? ಎಂಬ ವಿಷಯದ ಬಗ್ಗೆ ತಿಳಿದುಕೊಳ್ಳಲು ಕಾದುನೋಡಬೇಕಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.