ಲಖನೌ: ಉತ್ತರ ಪ್ರದೇಶದಲ್ಲಿ ಪ್ರಾಣಿಗಳಿಗೆ ಮೇವು ಸಂಗ್ರಹಿಸಲು ಹೋಗಿದ್ದ 19 ವರ್ಷದ ದಲಿತ ಬಾಲಕಿಯ ಮೇಲೆ ಮೇಲ್ಜಾತಿಯ ನಾಲ್ಕು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಸಾಯಿಸಲು ಪ್ರಯತ್ನಿಸಿದ್ದರು. ದಲಿತ ಬಾಲಕಿಯನ್ನು ಆಲಿಘಡ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಿ ತೀವ್ರ ನಿಗಾ ಘಟಕ (ಐಸಿಯು) ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪಶ್ಸಿಮಾ ಬಂಗಾಳದ ತೃಣ ಮೂಲ ಕಾಂಗ್ರೆಸ್ ಪಕ್ಷದ ಸದಸ್ಯೆ, ಸಂಸದೆ, ಖ್ಯಾತ ನಟಿ ನುಸ್ರತ್ ಜಹಾನ್ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಸಂಸದೆ, ನಟಿ ನುಸ್ರತ್ ಜಹಾನ್ ಟ್ವೀಟ್ ಮಾಡಿದ್ದೂ,”ಈ ರಾಕ್ಷಸರ ಕೈಯಲ್ಲಿ ದಲಿತ ಹುಡುಗಿಯರು ಎಷ್ಟು ದಿನ ಅನುಭವಿಸಬೇಕು? ಭಾರತ ಬಿಜೆಪಿ ಸರ್ಕಾರ ಏಕೆ ದಲಿತ ವಿರೋಧಿ ಮತ್ತು ಮಹಿಳಾ ವಿರೋಧಿ? ಯೋಗಿ ಆದಿತ್ಯನಾಥ್ ಯುಪಿಯಲ್ಲಿ ನಡೆಯುತ್ತಿರುವ ಈ ಕೃತ್ಯಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ, ಯುಪಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಷ್ಟು ಕೆಟ್ಟದಾಗಿರಬೇಕು ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
For how long will Dalit girls have to suffer in the hands of these monsters? Why is @BJP4India so anti-Dalit & anti-women? @myogiadityanath has clearly normalized these unspeakable acts in UP! Can’t even imagine how badly terrorized women in UP must be! https://t.co/PQxvhLhSS0
— Nusrat Jahan Ruhi (@nusratchirps) September 24, 2020