ಚೆನ್ನೈ: ಖ್ಯಾತ ನಟಿ, ಬಿಜೆಪಿ ಮುಖಂಡೆ ಖುಷ್ಬೂ ಸುಂದರ್ ಅವರ ಕಾರು ಬುಧವಾರ ಬೆಳಿಗ್ಗೆ ಅಪಘಾತಕ್ಕೆ ಸಿಲುಕಿದ್ದು ಎಲ್ಲರಿಗು ತಿಳಿದ ವಿಷಯ. ತಮಿಳುನಾಡಿನಲ್ಲಿ ಬಿಜೆಪಿಯ ವೆಲ್ ಯಾತ್ರಾ ಅಭಿಯಾನದಲ್ಲಿ ಭಾಗವಹಿಸಲು ಖುಷ್ಬು ಅವರು ಕಡಲೂರಿಗೆ ತೆರಳುತ್ತಿರುವಾಗ, ಚೆನ್ನೈ-ತಿರುಚ್ಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಲ್ಮರುವಾತೂರ್ ಬಳಿ ಟ್ಯಾಂಕರ್ ತನ್ನ ಕಾರಿಗೆ ಡಿಕ್ಕಿ ಹೊಡೆದಿತ್ತು.
ಈ ಘಟನೆಯಲ್ಲಿ, ಕಾರು ಒಂದು ಬದಿಯಲ್ಲಿ ಪುಡಿಪುಡಿಯಾಗಿದ್ದು, ಅದರಲ್ಲಿ ನಟಿ ಖುಷ್ಬೂ ಸಿಲಿಕಿಕೊಂಡಿದ್ದರು. ನಟಿ ಖುಷ್ಬೂ ಅವರ ಕಾರು ಚಾಲಕ ಮುರುಗನ್ ಸ್ಥಳೀಯರ ಸಹಾಯದಿಂದ ಅವರನ್ನು ಕಾರಿನಿಂದ ಹೊರತೆಗೆದು ರಕ್ಷಿಸಿದ್ದರು.
ಅಪಘಾತದ ಬಗ್ಗೆ ಮಾಹಿತಿ ದೊರೆತ ಕೂಡಲೇ ಪೊಲೀಸರು ಅಲ್ಲಿಗೆ ಹೋಗಿ ಖುಷ್ಬೂ ಅವರನ್ನು ವಿಚಾರಿಸಿದರು. ಆದರೆ ಈ ಅಪಘಾತಕ್ಕೆ ಪ್ರತಿಕ್ರಿಯಿಸಿದ ಖುಷ್ಬೂ, ಇದು ಅಪಘಾತವಲ್ಲ, ತನ್ನನ್ನು ಕೊಲ್ಲುಲು ಮಾಡಿದ ಪಿತೂರಿ ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಸತ್ಯ ಏನುಂಬುದು ಬೆಳಕಿಗೆ ಬರುತ್ತದೆ ಎಂದು ಹೇಳಿದ್ದಾರೆ. ತಾನು ಬಿಜೆಪಿಗೆ ಸೇರಿದಾಗಿನಿಂದ ಬೆದರಿಕೆಗಳು ಹೆಚ್ಚಿವೆ, ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ನಟಿ, ಬಿಜೆಪಿ ಖುಷ್ಬೂ ಸುಂದರ್ ಅವರು ಹೇಳಿದ್ದಾರೆ.
ಇದನ್ನು ಓದಿ: ಖ್ಯಾತ ನಟಿ, ಬಿಜೆಪಿ ಮುಖಂಡೆ ‘ಖುಷ್ಬೂ’ ಚಲಿಸುತ್ತಿದ್ದ ಕಾರು ಅಪಘಾತ!