ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ನಟಿ ಅರ್ಪಿತಾ ಮುಖರ್ಜಿ ಜೈಲು ಸೇರಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿದ್ದ ಇಡಿ, ನಟಿ ಅರ್ಪಿತಾ ಮನೆಯಲ್ಲಿ ಸಿಕ್ಕ ಎಲ್ಲಾ ಹಣ ಮತ್ತು ಚಿನ್ನಾಭರಣ ಪಾರ್ಥ ಚಟರ್ಜಿಗೆ ಸೇರಿದ್ದು ಎಂದು ಒಪ್ಪಿಕೊಂಡಿರುವುದಾಗಿ ತಿಳಿಸಿತ್ತು.
ಇದೀಗ ಪಾರ್ಥ ಚಟರ್ಜಿ ಮತ್ತು ನಟಿ ಅರ್ಪಿತಾ ನಡುವಿನ ಆಪ್ತ ಸಂಬಂಧದ ಬಗ್ಗೆ ಸ್ಪೋಟಕ ಸುದ್ದಿಯೊಂದು ಹೊರ ಬಿದ್ದಿದ್ದು, ಅರ್ಪಿತಾ ಮುಖರ್ಜಿ ಪಾರ್ಥ ಅವರ ಮೂಲಕ ಮಗುವನ್ನು ದತ್ತು ಪಡೆಯಲು ಬಯಸಿದ್ದರು ಎಂದು ಜಾರಿ ನಿರ್ದೇಶನಾಲಯ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ.
ಪಾರ್ಥ ಚಟರ್ಜಿ ಅವರು ತಮ್ಮ ಕುಟುಂಬದ ಸ್ನೇಹಿತರಾಗಿ ನಟಿ ಅರ್ಪಿತಾ ನೀಡಲಾದ ನಿರಾಕ್ಷೇಪಣಾ ಪ್ರಮಾಣಪತ್ರಕ್ಕೆ ಸಹಿ ಹಾಕಿದ್ದರು ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಸೇರಿಸಿದೆ. ಅಲ್ಲದೆ, ಮಾಜಿ ಸಚಿವ ಪಾರ್ಥ ಚಟರ್ಜಿ ತಮ್ಮ ಎಲ್ಲ ವ್ಯವಹಾರಗಳಿಗೆ ನಟಿ ಅರ್ಪಿತಾಳನ್ನೇ ನಾಮಿನಿಯಾಗಿ ಕೂಡ ಮಾಡಿದ್ದರಂತೆ.