ಚೆನ್ನೈ: ತಮಿಳು ಚಿತ್ರರಂಗದಲ್ಲಿ ವಿಶಿಷ್ಟ ನಟ ಎಂದು ಕರೆಯಲ್ಪಡುವ ವಿಜಯ್ ಸೇತುಪತಿ ವಿವಾದದಲ್ಲಿ ಸಿಲುಕಿದ್ದಾರೆ. ಸಿನೆಮಾ ವಿಷಯದಲ್ಲಿ ಯಾವುದೇ ಪಾತ್ರವನ್ನು ಮಾಡಬಲ್ಲ ಸಾಮರ್ತ್ಯವುಳ್ಳ ನಾಯಕ ಈಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಆಗುತ್ತಿದ್ದಾರೆ. ಟ್ವಿಟ್ಟರ್ನಲ್ಲಿ ಶೇಮ್ ಶೇಮ್ ವಿಜಯ್ ಸೇತುಪತಿ ಎಂದು ಟ್ರೊಲ್ ಮಾಡುತ್ತಿದ್ದಾರೆ.
ಇದಕ್ಕೆ ಕಾರಣ ವಿಜಯ್ ಸೇತುಪತಿ ಅವರು ಶ್ರೀಲಂಕಾದ ಕ್ರಿಕೆಟ್ ದಂತಕಥೆ, ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಜೀವನಚರಿತ್ರೆಯಲ್ಲಿ ನಟಿಸುತ್ತಿದ್ದಾರೆ. ಮುರಳೀಧರನ್ ಪಾತ್ರದಲ್ಲಿ ಮುಂಬರುವ ‘800’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ‘ಮೋಷನ್’ ಪೋಸ್ಟರ್ ಜೊತೆಗೆ ವಿಜಯ್ ಸೇತುಪತಿ ಅವರ ಲುಕ್ ಕೂಡ ಇತ್ತೀಚೆಗೆ ಬಿಡುಗಡೆಯಾಗಿದೆ.
ಆದರೆ ಈ ವಿಷಯಕ್ಕೆ ಸಂದಿಸಿದಂತೆ ನೆಟ್ಟಿಗರು ವಿಜಯ್ ಸೇತುಪತಿ ವಿರುದ್ಧ ಟ್ರೊಲ್ ಮಾಡುತ್ತಿದ್ದಾರೆ. ಶ್ರೀಲಂಕಾ ಸರ್ಕಾರವು ಕೆಲವು ವರ್ಷಗಳಿಂದ ತಮಿಳರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ತಮಿಳು ನಟ ವಿಜಯ್ ಸೇತುಪತಿ ಆ ದೇಶದ ಕ್ರಿಕೆಟಿಗನ ಪಾತ್ರವನ್ನು ಹೇಗೆ ನಟಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಭಾರತೀಯರಾಗಿದ್ದು ಶ್ರೀಲಂಕಾದ ರಾಷ್ಟ್ರೀಯ ದ್ವಜ ಇರುವ ಜರ್ಸಿ ಹೇಗೆ ಧರಿಸುತ್ತಾರೆ ಎಂದು ನೆಟ್ಟಿಗರು ಪ್ರಶ್ನಿಸಿದ್ದು, ‘ಶೇಮ್ ಆನ್ ವಿಜಯ್ ಸೇತುಪತಿ’ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವಿಟರ್‌ನಲ್ಲಿ ಟ್ರೊಲ್ ಮಾಡುತ್ತಿದ್ದು ಸದ್ಯ ವೈರಲ್ ಆಗಿದೆ.
ಆದರೆ ಮತ್ತೊಂದು ವರ್ಗ ವಿಜಯ್ ಸೇತುಪತಿ ಅವರಿಗೆ ಬೆಂಬಲ ಸೂಚಿಸಿದೆ. ವಿಜಯ್ ಸೇತುಪತಿ ಒಬ್ಬ ನಟ. ನಿರ್ದೇಶಕ ಏನು ಹೇಳುತ್ತಾನೋ ಅದನ್ನು ಮಾಡುವುದು ಅವರ ಕರ್ತವ್ಯ. ಇಗಿದ್ದಾಗ ಅವರನ್ನು ಹೇಗೆ ವಿಮರ್ಶೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು ಭಾರತೀಯ ಮೂಲದ ತಮಿಳು ಯುವತಿಯನ್ನು ಮದುವೆಯಾಗಿದ್ದು, ಭಾರತೀಯ ಪೌರತ್ವವನ್ನು ಸಹ ಪಡೆದಿದ್ದಾರೆ ಹೀಗಿರುವಾಗ ವಿಜಯ್ ಸೇತುಪತಿ ಅವರು ನಟಿಸುವುದನ್ನು ಏಕೆ ವಿರೋದಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: 22 ವರ್ಷದ ನಂತರ ಮತ್ತೆ ಜೊತೆಯಾಗಲಿರುವ ‘ಜೀನ್ಸ್’ ಜೋಡಿ: ಖ್ಯಾತ ನಟಿ ತಬು ಪಾತ್ರದಲ್ಲಿ ಐಶ್ವರ್ಯ ರೈ…?




