ಬೆಂಗಳೂರು: ಏಕಕಾಲಕ್ಕೆ ರಾಜ್ಯದ 28 ಕಡೆ ಎಸಿಬಿ ದಾಳಿ ನಡೆಸಿದ್ದು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 9 ಅಧಿಕಾರಿಗಳ ಕಚೇರಿ & ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ರಾಜ್ಯದ 11 ಜಿಲ್ಲೆಗಳಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಫ್ಯಾಕ್ಟರೀಸ್ & ಬಾಯ್ಲರ್ಸ್ ಇಲಾಖೆ ಉಪ ನಿರ್ದೇಶಕ ಪ್ರಥಮ್ ಅವರ ದಾವಣಗೆರೆ, ಬೆಂಗಳೂರಿನ ನಿವಾಸ ಮತ್ತು ಕಚೇರಿ ಸೇರಿದಂತೆ ಇತರೆ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಲಾಗಿದೆ.
ಯಾದಗಿರಿ: ಜೆಸ್ಕಾಮ್ ಲೆಕ್ಕಾಧಿಕಾರಿ ಮೇಲೆ ಎಸಿಬಿ ದಾಳಿ
ಇಂದು ಬೆಳ್ಳಂ ಬೆಳಗ್ಗೆ ಯಾದಗಿರಿ ನಗರದ ಸಹರಾ ಕಾಲೋನಿಯಲ್ಲಿರುವ ಜೆಸ್ಕಾಮ್ ಲೆಕ್ಕಾಧಿಕಾರಿ ರಾಜು ಪತ್ತಾರ್ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ, ನಿರೀಕ್ಷೆಗೂ ಮೀರಿದ ನಗದು ಹಣ & ಚಿನ್ನಾಭರಣ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಆದಾಯಕ್ಕೂ ಮೀರಿದ ಅಕ್ರಮ ಹಣ ಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದ ಹಿನ್ನೆಲೆ ದಾಳಿ ನಡೆಸಲಾಗಿದ್ದು, ಇನ್ನೂ ಕೂಡ ಪರಿಶೀಲನೆ ಮುಂದುವರಿದಿದೆ.
ಮಂಡ್ಯ: ಎಫ್ ಡಿಎ ಮನೆ ಮೇಲೆ ಎಸಿಬಿ ದಾಳಿ:
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ಮಂಡ್ಯದಲ್ಲೂ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು, ಆರ್ ಟಿಒ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎ.ವಿ.ಚೆನ್ನವೀರಪ್ಪ ಎಂಬುವವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಮಂಡ್ಯದ ಕುವೆಂಪುನಗರದಲ್ಲಿ ಮನೆ ಇದ್ದು, ತಾಲೂಕಿನ ಆಲಕೆರೆ ಮನೆ ಮೇಲೂ ದಾಳಿ ನಡೆಸಲಾಗಿದ್ದು, ಈ ವೇಳೆ ಕೆಲ ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ಇನ್ನೂ ಮುಂದುವರಿದಿದೆ ಎಂದು ಹೇಳಲಾಗಿದೆ.
ಎಸಿಬಿ ದಾಳಿಗೆ ಒಳಗಾದ 9 ಅಧಿಕಾರಿಗಳ ವಿವರ:
>ಬಿಬಿಎಂಪಿಯ ನಗರ ಯೋಜನೆಯ ಜೆಇ, ಎಡಿ ಕೆ.ಸುಬ್ರಹ್ಮಣ್ಯ
>ಚಾವಿಸನಿನಿ ಸೂಪರಿಂಟೆಂಟ್ ಇಂಜಿನಿಯರ್ ಮುನಿಗೋಪಾಲರಾಜು
>ಮೈಸೂರು ನಗರ ಯೋಜನೆ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ಕೆ.ವಡ್ಡರ್
>ಮಂಡ್ಯ ಆರ್ ಟಿಒ ಎಫ್ ಡಿಎ ಚನ್ನವೀರಪ್ಪ,
>ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ,
>ಡೆಪ್ಯುಟಿಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಹಣಮಂತ ಶಿವಪ್ಪ ಚಿಕ್ಕಣ್ಣನವರ್
>ಯಾದಗಿರಿ ಜೆಸ್ಕಾಮ್ ಲೆಕ್ಕಾಧಿಕಾರಿ ರಾಜು ಪತ್ತಾರ್.
>ಬಿಎಂಟಿಎಫ್ ಪೊಲೀಸ್ ಇನ್ಸ್ಪೆಕ್ಟರ್ ವಿಕ್ಟರ್ ಸಿಮೋನ್