ಆಧಾರ್ ಕಾರ್ಡ್ ಬಳಕೆದಾರರ ಅನುಕೂಲಕ್ಕಾಗಿ, UMANG ಅಪ್ಲಿಕೇಶನ್ ನಾಗರಿಕ-ಕೇಂದ್ರಿತ ಸೇವೆಗಳಿಗಾಗಿ ಹೊಸ ಶ್ರೇಣಿಯನ್ನು ಸೇರಿಸಿದೆ. UMANG ಆಪ್‌ನಲ್ಲಿ ಲಭ್ಯವಿರುವ 4 ಹೊಸ ಸೇವೆಗಳು ಇಲ್ಲಿವೆ..
★ಆಧಾರ್ ಸ್ಥಿತಿಯನ್ನು ಪರಿಶೀಲಿಸಲು ನಾಗರಿಕರು ಈ ಸೇವೆಯನ್ನು ಬಳಸಬಹುದು.
★ದಾಖಲಾತಿ ಅಥವಾ ನವೀಕರಣ ವಿನಂತಿಯನ್ನು ಸಲ್ಲಿಸಲು.
★ಆಧಾರ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ಮತ್ತು ಇಮೇಲ್ ಅನ್ನು ಪರಿಶೀಲಿಸಲು
★ಆಧಾರ್ ಅಥವಾ EID ಸಂಖ್ಯೆ ಕಂಡುಹಿಡಿಯಲು ಈ ಸೇವೆಯನ್ನು ಬಳಸಿ.
ನಿಮ್ಮ ಆಧಾರ್ ಕಾರ್ಡ್‌ನಲ್ಲೂ ಇದೆ ವೆರೈಟಿ:
ಆಧಾರ್ ಕಾರ್ಡ್ ಇಂದು ದೇಶದ ಪ್ರತಿಯೊಂದು ಸೇವೆಗೂ ಬಹುಮುಖ್ಯವಾಗಿ ಬೇಕಾಗಿದೆ. ಆದ್ರೆ ನಿಮ್ಮ ಬಳಿ ಇರುವ ಆಧಾರ್ ಕಾರ್ಡ್‌ನಲ್ಲೂ ವಿವಿಧ ಬಗೆಗಳಿವೆ ಎಂದು ಗೊತ್ತಾ, ಇಲ್ಲಂತಾದ್ರೆ ಇಲ್ಲಿ ನೋಡಿ.
➤PVC ಆಧಾರ್ ಕಾರ್ಡ್- ಇದು ಕ್ರೆಡಿಟ್ ಕಾರ್ಡ್‌ನಂತೆ ನೀವು ಬಳಸಬಹುದು.
➤mAadhaar ಕಾರ್ಡ್- ಇದು ಮೊಬೈಲ್ ಆಪ್ ಆಗಿದ್ದು, ಆಧಾರ್‌ನ್ನು ಇ-ಕಾಪಿಯಾಗಿ ಸೇವ್ ಮಾಡಿ ಇಡಬಹುದು.
➤ಇ-ಆಧಾರ್ ಕಾರ್ಡ್- ಇದು ಪಡೆದ ಬಳಿಕ ಪಾಸ್‌ವರ್ಡ್ ಕೇಳುತ್ತದೆ. ಈ ಮೂಲಕ ನಿಮ್ಮ ಅಧಾರ್‌ನ್ನು ಸುರಕ್ಷಿತವಾಗಿಡಬಹುದು