ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಜೂನ್ 30 ಕೊನೆಯ ದಿನವಾಗಿದ್ದು, ಲಿಂಕ್ ಆಗಿಲ್ಲವಾದರೆ 1,000 ರೂ.ದಂಡವನ್ನೂ ತುಂಬಬೇಕಾಗುತ್ತದೆ.
ಪಾನ್ ನಿಷ್ಕ್ರಿಯಗೊಂಡರೆ ಬ್ಯಾಂಕ್ ವಹಿವಾಟು ಸೇರಿದಂತೆ ವಾಣಿಜ್ಯ ವ್ಯವಹಾರಗಳಿಗೆ ಸಮಸ್ಯೆಯಾಗಲಿದ್ದು, ಸರ್ಕಾರದ ಎಲ್ಲ ಸೌಲಭ್ಯದಿಂದ ವಂಚಿತರಾಗುತ್ತೀರಿ. ಹೆಚ್ಚಿನ ಮಾಹಿತಿಗೆ ಐಟಿ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ www.incometaxindiaefiling.gov.in ಗೆ ಭೇಟಿ ನೀಡಿ.
ಆಧಾರ್-ಪಾನ್ ಲಿಂಕ್; ಇಲ್ಲಿದೆ ಸರಳ ವಿಧಾನ:
* www.incometaxindiaefiling.gov.in ವೆಬ್ ಸೈಟ್ ಗೆ ಭೇಟಿ ನೀಡಿ
*ಅಲ್ಲಿ ನೋಂದಣಿಯಾಗಿ (ಈ ಮುಂಚೆ ಆಗಿಲ್ಲವೆಂದರೆ), ನಿಮ್ಮ ಪಾನ್ ಸಂಖ್ಯೆ ನಿಮ್ಮ ಬಳಕೆದಾರರ ಐಡಿ ಆಗಿರಲಿದೆ.
*ನಿಮ್ಮ ಐಡಿ, ಪಾಸ್‌ವರ್ಡ್, ಜನ್ಮದಿನಾಂಕ ನಮೂದಿಸಿ ಲಾಗಿನ್ ಆಗಿ.
*ಪಾಪ್ ಅಪ್ ವಿಂಡೋದಲ್ಲಿ, ನಿಮ್ಮ ಪಾನ್ & ಆಧಾರ್ ಲಿಂಕ್ ಮಾಡುವ ಆಯ್ಕೆ ಬರುತ್ತದೆ. ಇಲ್ಲವಾದಲ್ಲಿ, ‘our services’ ಹೋಗಿ ಅಲ್ಲಿ ‘Link Aadhaar’ ಕ್ಲಿಕ್ ಮಾಡಬೇಕು.
*ಪಾನ್ ವಿವರ ಆಧರಿಸಿ ನಿಮ್ಮ ಹೆಸರು, ಜನ್ಮ ದಿನಾಂಕ ಮುಂತಾದ ಮಾಹಿತಿ ಮುಂಚೆಯೇ ನಮೂದಿಸಲಾಗಿರುತ್ತದೆ.