ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯೇ? ಅಗಾದರೆ, ನೀವು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ನೀವು ಇದನ್ನು ಮಾಡದಿದ್ದರೆ ನೀವು ತೊಂದರೆ ಅನುಭವಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ 1000 ರೂ.ಗಳ ದಂಡವನ್ನೂ ಪಾವತಿಸಬೇಕು. ಈ ಬಗ್ಗೆ ಬ್ಯಾಂಕುಗಳು ಈಗಾಗಲೇ ಗ್ರಾಹಕರಿಗೆ ಮಾಹಿತಿ ನೀಡುತ್ತಿವೆ.
ಪ್ಯಾನ್ ಆಧಾರ್ ಲಿಂಕ್ ಜೂನ್ 30 ಕ್ಕೆ ಮುಕ್ತಾಯಗೊಳ್ಳಲಿದೆ. ಅಂದರೆ ನೀವು ಖಂಡಿತವಾಗಿಯೂ ಈ ತಿಂಗಳು ಎರಡನ್ನು ಲಿಂಕ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ಮಾನ್ಯವಾಗಿಲ್ಲದಿರುವುದಿಲ್ಲ. ಇದರಿಂದ ನಿಮಗೆ ಅಗತ್ಯವಿರುವ ಕಡೆ ಪ್ಯಾನ್ ಕಾರ್ಡ್ ಬಳಸದಂತೆ ಇದು ತಡೆಯುತ್ತದೆ. ಇದರಿಂದ ತೊಂದರೆಗೆ ಒಳಗಾಗಬೇಕಾಗುತ್ತದೆ.
ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ನಿಮಗೆ 2 ಸುಲಭ ಆಯ್ಕೆಗಳಿವೆ. ನೀವು ಆನ್‌ಲೈನ್‌ನಲ್ಲಿ ಪ್ಯಾನ್ ಆಧಾರ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಬಹುದು. ಇದಕ್ಕಾಗಿ ನೀವು https://incometaxindia.gov.in/Pages/default.aspx ವೆಬ್‌ಸೈಟ್‌ಗೆ ಹೋಗಬೇಕಾಗಿದೆ. ಅದರ ಕೆಳಗೆ ಇಂಪಾರ್ಟ್ಮೆಂಟ್ ಲಿಂಕ್ (ಡಿಪಾರ್ಟ್ಮೆಂಟ್ ಲಿಂಕ್) ಎಂದು ಇರುತ್ತದೆ. ಇದರಲ್ಲಿ ಪ್ಯಾನ್ ಆಧಾರ್ ಲಿಂಕ್ ಆಯ್ಕೆಯನ್ನು ತೋರಿಸುತ್ತದೆ.
ಅದರ ಮೇಲೆ ಕ್ಲಿಕ್ ಮಾಡುವುದರಿಂದ ಹೊಸ ವಿಂಡೋ ತೆರೆಯುತ್ತದೆ. ಆದರೆ, ಈ ಸೈಟ್ ಪ್ರಸ್ತುತ ನಿರ್ವಹಣೆಯಲ್ಲಿದೆ. ಆದ್ದರಿಂದ ಓಪನ್ ಆಗುವುದಿಲ್ಲ. ಓಪನ್ ಆದರೆ, ನಿಮ್ಮ ಆಧಾರ್ ಸಂಖ್ಯೆ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ನೀವು ಲಿಂಕ್ ಮಾಡಬಹುದು.
ಅಷ್ಟೇ ಅಲ್ಲದೆ, ನೀವು SMS ಮೂಲಕ ಎರಡನ್ನು ಲಿಂಕ್ ಮಾಡಬಹುದುದಾಗಿದ್ದು, 567678 ಅಥವಾ 56161 ಕ್ಕೆ ಯುಐಡಿಪಿಎನ್ (UIDPAN) ಟೈಪ್ ಮಾಡಿ ಸ್ಪೇಸ್ ಬಿಟ್ಟು ಆಧಾರ್ ಸಂಖ್ಯೆಯನ್ನು ನಮೂದಿಸಿ, ಸ್ಪೇಸ್ ಬಿಟ್ಟು ಪ್ಯಾನ್ ಸಂಖ್ಯೆಯನ್ನು ನಮೂದಿಸಿ ಸಂದೇಶ ಕಳುಹಿಸಬೇಕು.




