ರಾಜಕೀಯ ವಲಯದಲ್ಲಿ ಭಾರಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರಿ ರಾಮಚಂದ್ರರಾವ್ & ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಅವರ ಪ್ರಕರಣಕ್ಕೀಗ ಟ್ವಿಸ್ಟ್ ಸಿಕ್ಕಿದೆ.
ಹೌದು, ರಾಜಕುಮಾರ ಟಾಕಳೆಯ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಈ ಹಿನ್ನೆಲೆ ಅವರಿಗೆ ಬಂಧನದ ಭೀತಿ ಎದುರಾಗಿದೆ. ಟಾಕಳೆ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತಮ್ಮನ್ನು ಬಂಧಿಸದಂತೆ ಕೋರಿ ಬೆಳಗಾವಿಯ ಸೆಷನ್ ಕೋರ್ಟ್‌ನಲ್ಲಿ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಈ ಹಿಂದೆ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಎಂಬವರು ನವ್ಯಶ್ರೀ ವಿರುದ್ಧ ಹನಿಟ್ರ್ಯಾಪ್, ಸುಳ್ಳು ಕೇಸ್, ಮಾನಸಿಕ ಹಿಂಸೆ, ಬ್ಲಾಕ್ ಮೇಲ್, ಜೀವ ಬೆದರಿಕೆ ಇದೆ ಎಂದು ಪ್ರಕರಣ ದಾಖಲಿಸಿದ್ದರು. ಆದರೆ, ರಾಜಕುಮಾರ ಟಾಕಳೆ ನನ್ನ ಗಂಡ. ಅವನಿಂದ ನನಗೆ ಏನು ಮೋಸ ಆಗಿದ್ದು, ನಾನು ಯಾವ ರೀತಿ ಮದುವೆ ಆಗಿರುವೆ ಎಲ್ಲವನ್ನ ಹೇಳ್ತಿನಿ ಎಂದು ನವ್ಯಶ್ರೀ ಹೇಳಿದ್ದರು.
ಇದಾದ, ಮರು ದಿನ ರಾಜ್ ಕುಮಾರ್ ಟಾಕಳೆ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 376, 366, 312, 420, 354, 504, 506, 509 ಹಾಗೂ ಐಟಿ ಕಾಯಿದೆ 66E, 67A ಅಡಿ ದೂರು ದಾಖಲಿಸಿದ್ದರು.