ಮೊಬೈಲ್ ಫೋನ್‍ಗಳು, ಟ್ಯಾಬ್ಲೆಟ್ಗಳು ಮತ್ತು ಕ್ಯಾಮೆರಾಗಳು, ಮುಂತಾದ ಗ್ಯಾಜೆಟ್‍ಗಳಿಗೆ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಪರಿಚಯಿಸಲು ಯೂರೋಪಿಯನ್ ಯೂನಿಯನ್‌ನ ಸಂಸತ್ತು ಹೊಸ ನಿಯಮಗಳನ್ನು ಅನುಮೋದಿಸಿದ್ದು, 2024ರ ವೇಳೆಗೆ ಏಕರೂಪ ಚಾರ್ಜಿಂಗ್ ಪೋರ್ಟ್ ಅಳವಡಿಕೆಗೆ ಚಿಂತನೆ ನಡೆಸಲಾಗುತ್ತಿದೆ.
ಚಾರ್ಜಿಂಗ್ ಪೋರ್ಟ್ ಪರಿಚಯಿಸಲು ಯೂರೋಪಿಯನ್ ಯೂನಿಯನ್‌ನ ಸಂಸತ್ತು ಹೊಸ ನಿಯಮಗಳನ್ನು ಅನುಮೋದಿಸಿದ್ದು, ಮೊಬೈಲ್ ಫೋನ್‍ಗಳು, ಟ್ಯಾಬ್ಲೆಟ್ಗಳು ಮತ್ತು ಕ್ಯಾಮೆರಾಗಳು, ಮುಂತಾದ ಗ್ಯಾಜೆಟ್‍ಗಳಿಗೆ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಇರಲಿದ್ದು, ಇ–ರೀಡರ್‌ಗಳು, ಇಯರ್ ಬಡ್‌ಗಳಿಗೂ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಇರಲಿದೆ. ಆಂಡ್ರಾಯ್ಡ್ ಮತ್ತು ಐಫೋನ್ ಉತ್ಪನ್ನಗಳೂ ಏಕರೂಪ ಚಾರ್ಜಿಂಗ್ ಹೊಂದುವ ಸಾಧ್ಯತೆಯಿದೆ.