ಮೈಸೂರು: ಹುಟ್ಟೋ ಮಗುವಿಗೆ ಯಾವ ಜಾತಿ ಇರಿಸಬೇಕೆಂದು ದಂಪತಿಗಳ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರು ಜಿಲ್ಲೆಯ ಬಿಳಿಕೆರೆಯಲ್ಲಿ ನಡೆದಿದೆ.
ಹೌದು, ಅಶ್ವಿನಿ (23) ಮೃತ ಮಹಿಳೆಯಾಗಿದ್ದು, ಅಶ್ವಿನಿ ಮತ್ತು ಪ್ರಮೋದ್ ಪ್ರೀತಿಸಿ ವಿವಾಹವಾಗಿದ್ದರು. ಇವರಿಬ್ಬರ ಜಾತಿ ಬೇರೆ ಬೇರೆಯಾಗಿತ್ತು. ಅಶ್ವಿನಿ ಗರ್ಭಿಣಿಯಾಗಿದ್ದು, ಮಗುವಿಗೆ ಯಾವ ಜಾತಿ ಇರಿಸಬೇಕೆಂದು ಇಬ್ಬರ ಮಧ್ಯೆ ಜಗಳ ಆರಂಭವಾಗಿದ್ದು, ಇದು ವಿಕೋಪಕ್ಕೇರಿ 7 ತಿಂಗಳ ಗರ್ಭಿಣಿ ಅಶ್ವಿನಿ ತವರು ಸೇರಿದ್ದಳು.
ಇದರಿಂದ ಸಿಟ್ಟಿಗೆದ್ದ ಅಶ್ವಿನಿ (23) ಪತಿ ಪ್ರಮೋದ್ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




