ರಾಯಪುರ: ಎರಡು ಮಕ್ಕಳ ತಾಯಿಯೊಬ್ಬಳು 14 ವರ್ಷದ ಬಾಲಕನನ್ನೇ ಪ್ರೀತಿಸಿ ಆತನೊಂದಿಗೆ ಓಡಿ ಹೋಗಿರುವ ವಿಚಿತ್ರ ಘಟನೆ ಛತ್ತೀಸಗಢದ ಕೋರಬಾದದಲ್ಲಿ ನಡೆದಿದೆ.
ಓಡಿ ಹೋಗಿರುವ ಮಹಿಳೆಯ ಗಂಡ ಸರ್ಕಾರಿ ನೌಕರನಾಗಿದ್ದು, ಮನೆಯಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಯೇನು ಇರಲಿಲ್ಲ. ಆದರೆ ಆ ಮಹಿಳೆ ಮಾತ್ರ ಮಗನ ವಯಸ್ಸಿನ 14 ವರ್ಷದ ಬಾಲಕನಿಗೇ ಪ್ರಮಾಂಕುರವಾಗಿದ್ದು, ಆತನೊಂದಿಗೇ ಬದುಕಬೇಕೆಂದು ಗಂಟು ಮೂಟೆ ಕಟ್ಟಿಕೊಂಡು ಆತನನ್ನು ಕರೆದುಕೊಂಡು ಓಡಿ ಹೋಗಿದ್ದಳು.
ಇನ್ನು,ಈ ವಿಚಾರವಾಗಿ ಎರಡೂ ಕುಟುಂಬಗಳ ಸದಸ್ಯರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರ ಕೈಗೆ ಇವರಿಬ್ಬರರು ಸಿಕ್ಕಿಹಾಕಿಕೊಂಡಿದ್ದರು. ಅವರನ್ನು ವಾಪಸು ಕರೆದುಕೊಂಡು ಬಂದ ಪೊಲೀಸರು ಮಹಿಳೆಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ, ಬಾಲಕನನ್ನು ಆತನ ಮನೆಗೆ ವಾಪಸು ಕಳುಹಿಸಿಕೊಟ್ಟಿದ್ದಾರೆ.