ಬೆಂಗಳೂರು: ಕಳೆದ 24 ಗಂಟೆಗಳಲ್ಲಿ 8,249 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 27,47,539ಕ್ಕೆ ಏರಿಕೆಯಾಗಿದ್ದು, ಒಂದೇ ದಿನ 159 ಜನ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 32644ಕ್ಕೆ ತಲುಪಿದೆ.
ಇನ್ನು, ಒಂದೇ ದಿನ 14,975 ಜನ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 25,11,105ಕ್ಕೆ ಏರಿಕೆಯಾಗಿದ್ದು, ಸದ್ಯ 2,03,769 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ 4.86%ಕ್ಕೆ ಇಳಿಕೆಯಾಗಿದ್ದು, ಸಾವಿನ ಶೇಕಡಾವಾರು ಪ್ರಮಾಣ 1.92 ಆಗಿದೆ.
ದಿಢೀರ್ ಕೇಸ್ ಇಳಿಕೆ; ಯಾವ ಜಿಲ್ಲೆಯಲ್ಲಿ ಎಷ್ಟು?
ಬಾಗಲಕೋಟೆ-73, ಬಳ್ಳಾರಿ-189, ಬೆಳಗಾವಿ-436, ಬೆಂ.ಗ್ರಾ- 234, ಬೆಂಗಳೂರು-1154, ಬೀದರ್-9, ಚಾಮರಾಜನಗರ-162, ಚಿಕ್ಕಬಳ್ಳಾಪುರ-168, ಚಿಕ್ಕಮಗಳೂರು-332, ಚಿತ್ರದುರ್ಗ-123, ದ.ಕನ್ನಡ-506, ದಾವಣಗೆರೆ-260, ಧಾರವಾಡ-217, ಗದಗ-66, ಹಾಸನ-733, ಹಾವೇರಿ-65, ಕಲಬುರಗಿ-29, ಕೊಡಗು-189, ಕೋಲಾರ-179, ಕೊಪ್ಪಳ-98, ಮಂಡ್ಯ-366, ಮೈಸೂರು-817, ರಾಯಚೂರು-61, ರಾಮನಗರ-57, ಶಿವಮೊಗ್ಗ-429, ತುಮಕೂರು-576, ಉಡುಪಿ-215, ಉ.ಕನ್ನಡ-317, ವಿಜಯಪುರ-174, ಯಾದಗಿರಿ-21 ಪ್ರಕರಣಗಳು ಪತ್ತೆಯಾಗಿವೆ.