ಹಲವರು ಪಿಎಫ್ ಬಡ್ಡಿಗಾಗಿ ಕಾಯುತ್ತಿದ್ದು, 2022 ಪೂರ್ಣಗೊಂಡ ನಂತರವೂ ಪಿಎಫ್‌ಗೆ ಯಾವುದೇ ಬಡ್ಡಿ ಹಣ ಬಂದಿಲ್ಲ ಎಂದು ಆರೋಪಿಸಿದ್ದು, ಅಂತವರಿಗೆ ಶುಭ ಸುದ್ದಿಯಿದೆ.
ಹೌದು, ಜನವರಿ ಅಂತ್ಯಕ್ಕೆ, ಅಂದರೆ ಬಜೆಟ್ ಗೂ ಮುನ್ನ ಈ ಹಣ ವರ್ಗಾವಣೆಯಾಗಲಿದೆಯಂತೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಇಪಿಎಫ್ ಠೇವಣಿಗಳ ಮೇಲೆ ಶೇ.8.1ರಷ್ಟು ಬಡ್ಡಿ ನೀಡಬಹುದು ಎಂದು ವರದಿಯಾಗಿದ್ದು,ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.