ಮಕ್ಕಳ ಮೇಲೆ ಕೊರೊನಾ ಸೋಂಕಿನ ತೀವ್ರತೆ ಕಡಿಮೆ: ಶೇ.75.38 ಮಕ್ಕಳು ಕೊರೋನಾದಿಂದ ಪಾರು!

ರಾಜ್ಯದಲ್ಲೀಗ ಮಕ್ಕಳ ಮೇಲೆ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಿದ್ದು, 6ರಿಂದ 14 ವರ್ಷದವರಲ್ಲಿ ಶೇ 75.38ರಷ್ಟು ಮಕ್ಕಳಲ್ಲಿ ‘ಇಮ್ಯುನೊಗ್ಲೋಬ್ಯುಲಿನ್ ಜಿ’ (ಐಜಿಜಿ) ಪ್ರತಿಕಾಯ ವೃದ್ಧಿಯಾಗಿದೆ ಎಂದು “ಸೆರೋ ಸಮೀಕ್ಷೆ”ಯಿಂದ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.…

corona virus

ರಾಜ್ಯದಲ್ಲೀಗ ಮಕ್ಕಳ ಮೇಲೆ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಿದ್ದು, 6ರಿಂದ 14 ವರ್ಷದವರಲ್ಲಿ ಶೇ 75.38ರಷ್ಟು ಮಕ್ಕಳಲ್ಲಿ ‘ಇಮ್ಯುನೊಗ್ಲೋಬ್ಯುಲಿನ್ ಜಿ’ (ಐಜಿಜಿ) ಪ್ರತಿಕಾಯ ವೃದ್ಧಿಯಾಗಿದೆ ಎಂದು “ಸೆರೋ ಸಮೀಕ್ಷೆ”ಯಿಂದ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

ಹೌದು, 2,726 ಗಂಡು, 2,632 ಹೆಣ್ಣು ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿತ್ತು. ನಗರ ಪ್ರದೇಶ, ಕೊಳಚೆ ಪ್ರದೇಶ, ಗ್ರಾಮೀಣ ಪ್ರದೇಶ ಎಂದು ವರ್ಗೀಕರಿಸಲಾಗಿತ್ತು. 709 ಮಕ್ಕಳಿಗೆ ರೋಗ ಲಕ್ಷಣ ಇತ್ತು. ಆದರೆ, ಸೋಂಕು ದೃಢಪಟ್ಟಿರಲಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಿಂದ 5,358 ಮಕ್ಕಳ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗಿತ್ತು.

ಇನ್ನು, 6ರಿಂದ14 ವರ್ಷದ ಮಕ್ಕಳು ಲಸಿಕಾ ಅಭಿಯಾನದಿಂದ ಹೊರಗುಳಿದಿದ್ದರಿಂದ ಅವರಲ್ಲಿ ಸೋಂಕಿನ ತೀವ್ರತೆ ಹಾಗೂ ಪರಿಣಾಮದ ಬಗ್ಗೆ ತಿಳಿಯುವುದು ಸಮೀಕ್ಷೆಯ ಉದ್ದೇಶವಾಗಿತ್ತು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.