1019 ದಿನಗಳ ಬಳಿಕ ಭರ್ಜರಿ ಶತಕ: ಚರಿತ್ರೆ ಸೃಷ್ಟಿಸಿದ ವಿರಾಟ್ ಕೊಹ್ಲಿ; ದಾಖಲೆ ಮೇಲೊಂದು ದಾಖಲೆ

T20 ಕ್ರಿಕೆಟ್‌ನಲ್ಲಿ‌ 3500 ರನ್ ಪೂರೈಸಿದ ವಿಶ್ವದ 2ನೇ ಬ್ಯಾಟ್ಸಮನ್ ಆಗಿದ್ದು, ಅಂತರರಾಷ್ಟ್ರೀಯ T20ಯಲ್ಲಿ ಹೆಚ್ಚು ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ನಾಯಕ ರೋಹಿತ್ ಶರ್ಮಾ 3620 ರನ್ ಗಳಿಸುವ ಮೂಲಕ, ಅಗ್ರಸ್ಥಾನದಲ್ಲಿದ್ದಾರೆ. 3497…

Virat Kohli

T20 ಕ್ರಿಕೆಟ್‌ನಲ್ಲಿ‌ 3500 ರನ್ ಪೂರೈಸಿದ ವಿಶ್ವದ 2ನೇ ಬ್ಯಾಟ್ಸಮನ್ ಆಗಿದ್ದು, ಅಂತರರಾಷ್ಟ್ರೀಯ T20ಯಲ್ಲಿ ಹೆಚ್ಚು ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ನಾಯಕ ರೋಹಿತ್ ಶರ್ಮಾ 3620 ರನ್ ಗಳಿಸುವ ಮೂಲಕ, ಅಗ್ರಸ್ಥಾನದಲ್ಲಿದ್ದಾರೆ. 3497 ರನ್ ಬಾರಿಸಿರುವ ಮಾರ್ಟಿನ್ ಗಪ್ಟಿಲ್ 3ನೇ ಸ್ಥಾನದಲ್ಲಿದ್ದಾರೆ.

1019 ದಿನಗಳ ಬಳಿಕ 71ನೇ ಶತಕ

ವಿರಾಟ್ ಕೊಹ್ಲಿ, ಬರೋಬ್ಬರಿ ಮೂರು ವರ್ಷಗಳ ಬಳಿಕ ಶತಕ ಬಾರಿಸಿದ್ದಾರೆ. ಹೌದು, ವಿರಾಟ್ ಶತಕ ಸಿಡಿಸಿ ಬರೋಬ್ಬರಿ 1019 ದಿನಗಳೇ ಕಳೆದಿದ್ದವು. ಕಳೆದ ಮೂರು ವರ್ಷಗಳಿಂದ ಬ್ಯಾಟ್​ನಿಂದ ಒಂದೇ ಒಂದು ಶತಕ ಕೂಡ ಬಂದಿರಲಿಲ್ಲ. 2019 ನವೆಂಬರ್ 23 ರಂದು ಬಾಂಗ್ಲಾದೇಶ ವಿರುದ್ಧ ವಿರಾಟ್ ಕೊನೆ ಶತಕ ಬಾರಿಸಿದ್ದರು. ಇದೀಗ 71ನೇ ಸೆಂಚುರಿ ಸಿಡಿಸಿ, ಗ್ರೇಟ್ ಕಮ್ ಬ್ಯಾಕ್ ಮಾಡಿದ್ದು, T20 ಮಾದರಿಯಲ್ಲಿ ಚೊಚ್ಚಲ ಶತಕ ಬಾರಿಸಿದ ಸಾಧನೆಯನ್ನು ವಿರಾಟ್ ಮಾಡಿದ್ದಾರೆ.

Vijayaprabha Mobile App free

ವಿರಾಟ್ ಕೊಹ್ಲಿ ಮತ್ತೊಂದು ಚರಿತ್ರೆ ಸೃಷ್ಟಿ:

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿರುವ ವಿರಾಟ್ ಕೊಹ್ಲಿ ಮತ್ತೊಂದು ಚರಿತ್ರೆ ಸೃಷ್ಟಿಸಿದ್ದು, T20ಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಬಾರಿಸಿದ ಸಾಧನೆಯನ್ನು ವಿರಾಟ್ ಮಾಡಿದ್ದಾರೆ.

➤ ವಿರಾಟ್ ಕೊಹ್ಲಿ – 122* ರನ್ (ಇಂದು)
➤ ರೋಹಿತ್ ಶರ್ಮಾ – 118 ರನ್
➤ ಸೂರ್ಯಕುಮಾರ್ – 117 ರನ್
➤ ರೋಹಿತ್ ಶರ್ಮಾ – 111* ರನ್

24 ಸಾವಿರ ರನ್‌ ಗಡಿ ದಾಟಿದ ಕೊಹ್ಲಿ:

ಸ್ಟಾರ್‌ ಇಂಡಿಯನ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ದಾಖಲೆ ಮೇಲೊಂದು ದಾಖಲೆ ಬರೆಯುತ್ತಿದ್ದು, ಈಗ ಸದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24 ಸಾವಿರ ರನ್‌ ಪೂರೈಸಿರುವ ದಾಖಲೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಹೌದು, ಏಷ್ಯಾ ಕಪ್‌ನ ಅಂಗವಾಗಿ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ 122 ರನ್‌ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 24,002 ರನ್‌ ಕಲೆಹಾಕಿದ್ದಾರೆ. ಇದು ಕೊಹ್ಲಿಯ 468ನೇ ಪಂದ್ಯವಾಗಿದ್ದು, 71ನೇ ಶತಕವಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.