ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 71ನೇ (17 ಸಪ್ಟೆಂಬರ್ 1950) ಜನ್ಮದಿನದ ಸಂಭ್ರಮವಾಗಿದೆ.
ಹೌದು, ತಮ್ಮ ದಿಟ್ಟ ನಿರ್ಧಾರ, ತಾಂತ್ರಿಕತೆಯ ಮೇಲಿನ ಒಲವು, ಅಭಿವೃದ್ಧಿಯ ಯೋಜನೆಗಳಿಂದ ಜನಪ್ರಿಯರಾದ ಪ್ರಧಾನಿ ಮೋದಿ ಸತತ 2ನೇ ಬಾರಿಗೆ ಪ್ರಧಾನಿಯಾಗುವ ಮೂಲಕ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು 2001 ರಂದು ಮೊದಲ ಬಾರಿಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ, ಮೊದಲಿನಿಂದಲೂ RSS ನ ಸಕ್ರೀಯ ಕಾರ್ಯಕರ್ತರಾಗಿದ್ದರು.
ಮೋದಿ ಜನ್ಮದಿನ: 71, ಸೆ.17 & ಅ.7.. ಏನಿದು ಲೆಕ್ಕಾಚಾರ?
ಪ್ರಧಾನಿ ಮೋದಿ ಇಂದು 71ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆ ಬಿಜೆಪಿಯು 20 ದಿನಗಳ ರಾಷ್ಟ್ರವ್ಯಾಪಿ ‘ಸೇವೆ & ಸಮರ್ಪಣೆ’ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನದಲ್ಲಿ ರಕ್ತದಾನ ಮುಂತಾದ ಕಾರ್ಯಕ್ರಮಗಳ ಆಯೋಜನೆಗೆ ಕೈಲಾಶ್ ವಿಜಯವರ್ಗೀಯ್ ನೇತೃತ್ವದಲ್ಲಿ ನಾಲ್ವರು ಸದಸ್ಯರ ಸಮಿತಿ ರಚಿಸಲಾಗಿದೆ.
ಮೋದಿ 71ನೇ ಜನ್ಮದಿನ ಸೆ.17ರಂದು ಆಚರಿಸಿಕೊಳ್ಳುತ್ತಿದ್ದು, ಅದರ 20 ದಿನ ನಂತರ ಬರುವ ಅಕ್ಟೊಬರ್ 7 ಕಳೆದೆರಡು ದಶಕಗಳ ಹಿಂದೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವಾಗಿದೆ.