ಜಾನುವಾರು ವಿಮೆ ಯೋಜನೆ | ಶೇ 70ರಷ್ಟು ಸಹಾಯಧನ; ನಿಯಮಗಳು, ಪ್ರಾಮುಖ್ಯತೆ

ಜಾನುವಾರು ವಿಮೆ ಯೋಜನೆ : ಪರಿಶಿಷ್ಟ ಜಾತಿ, ಪಂಗಡದ ರೈತ ಫಲಾನುಭವಿಗಳಿಗೆ ಸೇರಿದ ಜಾನುವಾರುಗಳಿಗೆ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉಚಿತ ವಿಮೆ ಸೌಲಭ್ಯವನ್ನು (Insurance facility) ನೀಡಲಾಗುತ್ತದೆ. ಹೋರಿ, ಎತ್ತು, ಕೋಣ ಹಾಗೂ…

livestock insurance scheme

ಜಾನುವಾರು ವಿಮೆ ಯೋಜನೆ : ಪರಿಶಿಷ್ಟ ಜಾತಿ, ಪಂಗಡದ ರೈತ ಫಲಾನುಭವಿಗಳಿಗೆ ಸೇರಿದ ಜಾನುವಾರುಗಳಿಗೆ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉಚಿತ ವಿಮೆ ಸೌಲಭ್ಯವನ್ನು (Insurance facility) ನೀಡಲಾಗುತ್ತದೆ.

ಹೋರಿ, ಎತ್ತು, ಕೋಣ ಹಾಗೂ ಹೈನುಗಾರಿಕೆಗೆ ಯೋಗ್ಯವಾದ 1 ವರ್ಷ ಮೇಲ್ಪಟ್ಟು 8 ವರ್ಷದೊಳಗಿನ ಮಣಕ, ಆಕಳು, ಎಮ್ಮೆಗಳನ್ನು ಒಟ್ಟಾರೆ ಮೂರು ವರ್ಷದ ವಿಮೆ ಯೋಜನೆಗೆ ಒಳಪಡಿಸಬಹುದಾಗಿದ್ದು, ಈ ಜಾನುವಾರುಗಳ ಮಾರುಕಟ್ಟೆ ಮೌಲ್ಯ 50 ಸಾವಿರ ರೂ ಆಗಿದ್ದರೆ ಆ ಪೈಕಿ ಶೇ.5.7ರಷ್ಟು (2850 ರೂ.) ಹಣವನ್ನು ಪ್ರಿಮಿಯಂ ಸರಕಾರ ಪಾವತಿಸಲಿದೆ.

ಇದನ್ನೂ ಓದಿ: ವೃತ್ತಿ ಪ್ರೋತ್ಸಾಹ ಸಾಲ ಯೋಜನೆ | ರೂ.1,00,000 ವರೆಗೆ ಉಚಿತ ಸಾಲ? ಉದ್ದೇಶ, ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ

Vijayaprabha Mobile App free

ಜಾನುವಾರು ವಿಮೆ ಯೋಜನೆ: ಶೇ. 70ರಷ್ಟು ಸಹಾಯಧನ

livestock insurance scheme

ಜಾನುವಾರುಗಳ ಆಕಸ್ಮಿಕ ಮರಣದಿಂದ ರೈತರು ಎದುರಿಸುವ ಆರ್ಥಿಕ ಸಂಕಷ್ಟ ನಿವಾರಣೆಗೆ ರಾಷ್ಟ್ರೀಯ ಜಾನುವಾರು ಮಿಷನ್ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಉಳಿಕೆಯಾಗಿರುವ ಅನುದಾನದಲ್ಲಿ ವಿಮೆ ಒದಗಿಸಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ರೈತರು ಸ್ಥಳೀಯ ಪಶು ವೈದ್ಯರನ್ನು ಸಂಪರ್ಕಿಸಿ ತಮ್ಮ ಹಸು, ಎಮ್ಮೆ, ಕೋಣ, ಎತ್ತು, ಆಡು, ಹಂದಿಗಳಿಗೆ 1 ವರ್ಷ, 2 ವರ್ಷ ಅಥವಾ 3 ವರ್ಷಗಳ ಅವಧಿಗೆ ಜೀವ ವಿಮೆ ಮಾಡಿಸಬಹುದು. ವಿಮೆಯ ಪ್ರೀಮಿಯಂ ಮೊತ್ತದಲ್ಲಿ ಶೇ. 70ರಷ್ಟು ಸಹಾಯಧನ ಇಲಾಖೆಯಿಂದ ಒದಗಿಸಲಾಗುತ್ತದೆ.

ಇದನ್ನೂ ಓದಿ: ಉಚಿತ ವಿದ್ಯುತ್‌ ಸಂಪರ್ಕ ಒದಗಿಸುವ ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆ; ಉದ್ದೇಶ, ಪ್ರಯೋಜನಗಳು, ಅರ್ಜಿ ಸಲ್ಲಿಕೆ

ಜಾನುವಾರು ವಿಮೆಯ ಯೋಜನೆ ಪ್ರಮುಖ ನಿಯಮಗಳು!

ಕೇಂದ್ರ ಸರ್ಕಾರ ಜಾನುವಾರುಗಳಿಗೂ ವಿಮಾ ಯೋಜನೆಯ ಪ್ರಮುಖ ನಿಯಮಗಳು ಇಂತಿದ್ದು, ಬೆಂಕಿ, ಪ್ರವಾಹ, ಚಂಡಮಾರುತ, ಭೂಕಂಪ ಮುಂತಾದವುಗಳಿಂದ ಉಂಟಾಗುವ ಜಾನುವಾರು ನಷ್ಟಕ್ಕೆ ವಿಮೆ ವ್ಯಾಪ್ತಿಗೆ ಬರುತ್ತದೆ.

ಜಾನುವಾರುಗಳು ವಿವಿಧ ರೀತಿಯ ಕಾಯಿಲೆಗಳಿಂದ ಮತ್ತು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸತ್ತರೆ, ವಿಮೆ ನೀಡಲಾಗುತ್ತಿದ್ದು, ನಿಮ್ಮ ಜಾನುವಾರುಗಳಿಗೆ ಲಸಿಕೆ ಹಾಕದ ಕಾರಣ ಅಂಗವೈಕಲ್ಯ ಅಥವಾ ಸಾವು ಉಂಟಾದರೆ ಅದಕ್ಕೆ ವಿಮೆ ಸಿಗುವುದಿಲ್ಲ. ಉದ್ದೇಶಪೂರ್ವಕ ವಧೆ, ಉದ್ದೇಶಪೂರ್ವಕ ಗಾಯದಿಂದಾಗಿ ಅಂಗವೈಕಲ್ಯ ಅಥವಾ ಸಾವಾದರೆ ವಿಮೆ ಸಿಗುವುದಿಲ್ಲ.

ಇದನ್ನು ಓದಿ: NALCO Recruitment | NALCO ದಲ್ಲಿ 518 ವಿವಿಧ ಹುದ್ದೆಗಳಿಗೆ ನೇಮಕಾತಿ

ಜಾನುವಾರು ವಿಮೆ ಯೋಜನೆಯಡಿ ದೇಶೀಯ, ಅಡ್ಡ ಮತ್ತು ತಳಿ ಜಾನುವಾರುಗಳಿಗೆ ವಿಮೆ

ಜಾನುವಾರು ವಿಮೆ ಯೋಜನೆಯಡಿ (Livestock Insurance Scheme) ಹಾಲು ಕೊಡುವ ಹಸುಗಳು, ಎಮ್ಮೆಗಳು, ಕರುಗಳು, ಆಕಳುಗಳು ಮತ್ತು ರಾಸುಗಳಿಗೆ ವಿಮೆ ಇದ್ದು, ಈ ವಿಮೆಯನ್ನು ತೆಗೆದುಕೊಳ್ಳಲು, ಜಾನುವಾರುಗಳು ಜಾನುವಾರುಗಳ ಒಟ್ಟು ಮಾರುಕಟ್ಟೆ ಮೌಲ್ಯದ ಮೇಲೆ ವರ್ಷಕ್ಕೆ 4 ಪ್ರತಿಶತದಷ್ಟು ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆಕಸ್ಮಿಕವಾಗಿ ಪ್ರಾಣಿ ಸತ್ತರೆ, ವಿಮೆಯ ಸಮಯದಲ್ಲಿ ಪ್ರಾಣಿಯ ಮಾರುಕಟ್ಟೆ ಮೌಲ್ಯದ ಮೊತ್ತವನ್ನು ಪರಿಹಾರವಾಗಿ ನೀಡಲಾಗುತ್ತಿದ್ದು, ಹಾಲು ಕೊಡದ ಜಾನುವಾರುಗಳಿಗೆ ಮಾರುಕಟ್ಟೆ ಮೌಲ್ಯದ ಶೇ.75 ರಷ್ಟು ಪರಿಹಾರ ನೀಡಲಾಗುತ್ತದೆ.

ಇದನ್ನೂ ಓದಿ: Udyogini yojana | ಉದ್ಯೋಗಿನಿ ಯೋಜನೆಯಿಂದ 3 ಲಕ್ಷ ಉಚಿತ ಲೋನ್ ಹೇಗೆ ಪಡೆಯಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಜಾನುವಾರು ವಿಮೆ ಮತ್ತು ಅದರ ಪ್ರಾಮುಖ್ಯತೆ

ರೈತರು ಕೃಷಿಯೊಂದಿಗೆ ಪಶುಪಾಲನೆಯನ್ನು ಕೂಡಾ ಮಾಡುತ್ತಾರೆ. ಪಶುಸಂಗೋಪನೆಯು ರೈತರಿಗೆ ಪ್ರಮುಖ ಆದಾಯದ ಮೂಲವಾಗಿದೆ. ಜಾನುವಾರುಗಳಿಗೆ ಏನಾದರೂ ತೊಂದರೆಯಾದರೆ ರೈತನಿಗೆ ಆರ್ಥಿಕ ನಷ್ಟವಾಗುತ್ತದೆ.

ರೈತರಿಗೆ ಆಗುವ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಜಾನುವಾರುಗಳಿಗೂ ವಿಮಾ ಯೋಜನೆ ಜಾರಿಗೆ ತಂದಿದೆ. ಅದರ ಹೆಸರು ಜಾನುವಾರು ವಿಮಾ ಯೋಜನೆ. ಇದರಡಿ ಜಾನುವಾರುಗಳು ಬೆಂಕಿ, ಪ್ರವಾಹ, ಭೂಕಂಪ ಅಥವಾ ವಿವಿಧ ರೀತಿಯ ಕಾಯಿಲೆಗಳಿಂದ ಮತ್ತು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸತ್ತರೆ, ವಿಮೆ ನೀಡಲಾಗುತ್ತದೆ.

ಕೃಪೆ – freedom app

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.