ಪಾಟ್ನಾ (ಬಿಹಾರ): ಬಿಮಾರು ರಾಜ್ಯವೆಂದೇ ಗುರುತಿಸಲ್ಪಟ್ಟಿದ್ದ ಬಿಹಾರದ ಸಿವಾನ್ ಹಾಗೂ ಸರಣ್ ಜಿಲ್ಲೆಯಲ್ಲಿ ನಕಲಿ ಮದ್ಯ (ಸಾರಾಯಿ) ಕುಡಿದು ಕನಿಷ್ಠ 6 ಜನ ಮೃತಪಟ್ಟಿದ್ದು, 14 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.
ಹೌದು, ಸಾಮಾನ್ಯವಾಗಿ ಸಾರಾಯಿ ಕುಡಿದವರು ತೆಲಾಡಿಕೊಂಡು ಕಂಡ ಕಂಡಲ್ಲಿ ಬೀಳುತ್ತಾರೆ. ಇಲ್ಲವೇ ಕೆಲಹೊತ್ತು ಪ್ರಜ್ಞೆ ಕಳೆದುಕೊಂಡವರಂತೆ ಈ ಜಗತ್ತನ್ನೇ ಮರೆತು ಮಲಗಿರುತ್ತಾರೆ. ಆದರೆ, ಬುಧವಾರ(ಅ.16) ಸಿವಾನ್ ಜಿಲ್ಲೆಯಲ್ಲಿ ನಾಲ್ವರು ಮತ್ತು ಸರಣ್ ಜಿಲ್ಲೆಯಲ್ಲಿ ಇಬ್ಬರು ಈ ಸಾರಾಯಿ ಚಟಕ್ಕೆ ಶಾಶ್ವತವಾಗಿ ಭೂಮಿಯನ್ನೇ ತೇಜಿಸಿದ್ದರೆ. ಇನ್ನೂ ಕೆಲವರು ಅಸ್ವಸ್ತವರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ನಕಲಿ ಮದ್ಯ ಸೇವನೆ ಕಾರಣ ಎಂದು ತಿಳಿದುಬಂದಿದೆ.
ನಿಷೇಧದ ಬಳಿಕ 150ಕ್ಕೂ ಅಧಿಕ ಸಾವು:
ಅ.15ರಂದು (ಮಂಗಳವಾರ) ರಾತ್ರಿ ನಕಲಿ ಮದ್ಯ ಸೇವನೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. 2016 ರಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ಹಾಗೂ ಸೇವನೆಗೆ ನಿಷೇಧ ಹೇರಿತ್ತು. ಆದರೂ ನಿಷೇಧದ ಬಳಿಕ ಇದುವರೆಗೂ ರಾಜ್ಯದಲ್ಲಿ 150ಕ್ಕೂ ಹೆಚ್ಚು ಜನರು ಸಾವಿಗೆ ಶರಣಾಗಿದ್ದಾರೆ.