ಭಾರತದಲ್ಲಿ 5G ಸೇವೆಗಳನ್ನು ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 1 ರಂದು(ಇಂದು) ಚಾಲನೆ ನೀಡಲಿದ್ದಾರೆ. ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC)ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಧಾನಿ 5G ಸೇವೆಗಳನ್ನು ಉದ್ಘಾಟಿಸಲಿದ್ದಾರೆ.
5G ಸೇವೆ ಇಂದು ಬಿಡುಗಡೆಯಾಗಲಿದ್ದು, ಆ ಬಳಿಕ ಸೇವೆಗಳನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದರು.
5G ವಿಶೇಷತೆ ಏನು? ಸ್ಪೀಡ್ ಎಷ್ಟು?
ಭಾರತದಲ್ಲಿ ಇಂದು 5G ಸೇವೆಗೆ ಚಾಲನೆ ಸಿಗಲಿದ್ದು, ಗರಿಷ್ಠ ಜಿಬಿಪಿಎಸ್ ಡೇಟಾ ವೇಗ, ಹೆಚ್ಚು ವಿಶ್ವಾಸಾರ್ಹತೆ, ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ನೆಟ್‌ವರ್ಕ್ ಇದಾಗಿದೆ. ಪ್ರತಿ ಸೆಕೆಂಡಿಗೆ 20 ಗಿಗಾಬೈಟ್ ವೇಗದ ಸಾಮರ್ಥ್ಯವನ್ನು 5G ಹೊಂದಿದೆ. 4G ವೇಗ 1 ಜಿಬಿಪಿಎಸ್ ಆಗಿದೆ.
5G ತಂತ್ರಜ್ಞಾನ ಅಳವಡಿಸಿಕೊಂಡ 11ನೇ ದೇಶ ಭಾರತ. ಅಮೆರಿಕ, ಚೀನಾ, ಫಿಲಿಪೈನ್ಸ್, ಉತ್ತರ ಕೊರಿಯಾ, ಕೆನಡಾ, ಸ್ಪೇನ್, ಇಟಲಿ, ಜರ್ಮನಿ, ಬ್ರಿಟನ್, ಸೌದಿ ಅರೇಬಿಯಾ 5G ಸೇವೆ ಹೊಂದಿದೆ.
1G, 2G, 3G, 4G ಇತಿಹಾಸ..
5G ಸೇವೆಗೂ ಮುನ್ನ 1G, 2G, 3G, 4G ನೆಟ್‌ವರ್ಕ್ ಹೊಂದಿದೆ.
➤ 1G: 1980ರ ದಶಕದಲ್ಲಿ ಬಂದ 1G ನೆಟ್‌ವರ್ಕ್‌ನಿಂದ ಕೇವಲ ಅನಲಾಗ್ ಧ್ವನಿ ರವಾನಿಸಬಹುದಿತ್ತು.
➤ 2G: 1990ರ ದಶಕದಲ್ಲಿ ಬಂದ 2G ಸೇವೆಯು ಡಿಜಿಟಲ್ ಧ್ವನಿ ಕರೆ ಪರಿಚಯಿಸಿತು.
➤ 3G: 2000ರ ದಶಕದಲ್ಲಿ ಬಂದ 3G ಸೇವೆ ಮೊಬೈಲ್ ಡೇಟಾ ಬಳಕೆಗೆ ಅನುವು ಮಾಡಿಕೊಟ್ಟಿತ್ತು.
➤ 4G: 2010ನೇ ದಶಕದಲ್ಲಿ ಬಂದ 4G ಮೊಬೈಲ್ ಬ್ರಾಡ್ ಬ್ರ್ಯಾಂಡ್ ಪರಿಚಯಿಸಿತು.