ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 5815 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 28,01,936ಕ್ಕೆ ಏರಿಕೆಯಾಗಿದೆ.
ಇನ್ನು, ಒಂದೇ ದಿನ 161 ಜನ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 33,763ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 11,832 ಜನ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 26,27,279ಕ್ಕೆ ಏರಿಕೆಯಾಗಿದ್ದು, ಸದ್ಯ 137050ಸಕ್ರಿಯ ಪ್ರಕರಣಗಳಿವೆ.
ಇಂದೇ 5,815 ಸೋಂಕು: ಯಾವ ಜಿಲ್ಲೆಯಲ್ಲಿ, ಎಷ್ಟು?:
ಬಾಗಲಕೋಟೆ-11, ಬಳ್ಳಾರಿ-128, ಬೆಳಗಾವಿ-222, ಬೆಂ.ಗ್ರಾ-161, ಬೆಂಗಳೂರು-1263, ಬೀದರ್-3, ಚಾಮರಾಜನಗರ-113, ಚಿಕ್ಕಬಳ್ಳಾಪುರ-105, ಚಿಕ್ಕಮಗಳೂರು-177, ಚಿತ್ರದುರ್ಗ-113, ದ.ಕನ್ನಡ-832, ದಾವಣಗೆರೆ-194, ಧಾರವಾಡ-83, ಗದಗ-28, ಹಾಸನ-391, ಹಾವೇರಿ-20, ಕಲಬುರಗಿ-28, ಕೊಡಗು-135, ಕೋಲಾರ-132, ಕೊಪ್ಪಳ-62, ಮಂಡ್ಯ-208, ಮೈಸೂರು-594, ರಾಯಚೂರು-16, ರಾಮನಗರ-24, ಶಿವಮೊಗ್ಗ-223, ತುಮಕೂರು-182, ಉಡುಪಿ-174, ಉ.ಕನ್ನಡ-144, ವಿಜಯಪುರ-44, ಯಾದಗಿರಿ-5 ಪ್ರಕರಣಗಳು ಪತ್ತೆಯಾಗಿವೆ.