ಶ್ರಾವಣ ಮಾಸದ ಕೊನೆ ವಾರ ರಾಜ್ಯದಿಂದ ಕಾಶಿಯಾತ್ರೆಗೆ ‘ಭಾರತ್ ಗೌರವ್’ ವಿಶೇಷ ರೈಲು ಹೊರಡಲಿದ್ದು, ಈ ಸೇವೆಗೆ ರೈಲ್ವೆ ಇಲಾಖೆ ಅನುಮತಿ ಲಭಿಸಿದೆ. ರೈಲನ್ನು ಬಾಡಿಗೆಗೆ ಪಡೆದು ಕಾಶಿಗೆ ಓಡಿಸಲು ಸಿದ್ಧತೆ ಕೈಗೊಳ್ಳಲಾಗಿದ್ದು, ಕಡಿಮೆ ಖರ್ಚಿನಲ್ಲಿ ಪುಣ್ಯ ಕ್ಷೇತ್ರ ಪ್ರವಾಸಕ್ಕೆ ಪ್ಯಾಕೇಜ್ ರೂಪಿಸಲಾಗಿದೆ. ರಿಯಾಯಿತಿ ದರದ 7 ದಿನದ ಯಾತ್ರೆಯಾಗಿದ್ದು, ಈ 7 ದಿನದ ಪ್ರವಾಸಕ್ಕೆ ಅಂದಾಜು 15,೦೦೦ ವೆಚ್ಚವಾಗಲಿದ್ದು, 5,೦೦೦ ರೂ ಸರ್ಕಾರದ ಸಹಾಯಧನವಿದೆ.
ಕಾಶಿ ಯಾತ್ರಿಕರಿಗೆ 5000: ಸಹಾಯಧನ ಪಡೆಯುವುದು ಹೇಗೆ?
ಇದೇ ಏ.1 ರಿಂದ ಪವಿತ್ರ ಪುಣ್ಯಕ್ಷೇತ್ರ ಕಾಶಿ ಯಾತ್ರೆ ಕೈಗೊಂಡವರು ಆಫ್‌ಲೈನ್ ಅರ್ಜಿಯನ್ನು ಮುಜರಾಯಿ ಆಯುಕ್ತರ ಕಚೇರಿಗೆ ಸಲ್ಲಿಸಿ, ಸಹಾಯಧನ ಪಡೆಯಬಹುದು.
ಅಗತ್ಯ ದಾಖಲೆಯನ್ನು ಇಲಾಖೆ ವೆಬ್‌ಸೈಟ್ https://itms.kar.nic.in/ ಮತ್ತು ಸೇವಾಸಿಂಧು ಪೊರ್ಟಲ್ https://sevasindhu.karnataka.gov.in ಅಪ್‌ಲೋಡ್ ಮಾಡಬೇಕು.
ದಾಖಲೆ ಪರಿಶೀಲಿಸಿ, ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ.