ಸಮಯ ಬದಲಾಗಿದೆ. ಖರ್ಚುಗಳು ಹೆಚ್ಚಾಗಿವೇ.ಹೊಸ ಹೊಸ ರೋಗಗಳು ಬರುತ್ತಿವೆ.ಇಂತಹ ಸಂದರ್ಭಗಳಲ್ಲಿ ಪ್ರತಿಯೊಬ್ಬರೂ ವಿಮೆಯನ್ನು ತೆಗೆದುಕೊಂಡರೆ ಒಳ್ಳೆಯದು.ವಿಮೆ ತೆಗೆದುಕೊಳ್ಳುವುದರಿಂದ ಅನಾರೋಗ್ಯ ಸಂಭವಿಸಿದರೆ ನೀವು ವಿಮೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಒಂದು ವೇಳೆ ಆಕಸ್ಮಿಕ ಸಾವು ಸಂಭವಿಸಿದಲ್ಲಿ, ಕುಟುಂಬಕ್ಕೆ ಆರ್ಥಿಕ ನೆರವು ಸಿಗುತ್ತದೆ.
ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬೇಕಾದರೆ ನೀವು ಪ್ರತಿ ತಿಂಗಳು ಪ್ರೀಮಿಯಂ ಕಂತನ್ನು ಅನ್ನು ಕಟ್ಟಬೇಕು. ಆದರೆ ನೀವು ಪ್ರೀಮಿಯಂ ಅನ್ನು ಕಟ್ಟದೆ ಉಚಿತವಾಗಿ ವಿಮೆಯನ್ನು ಪಡೆಯುವ ಅವಕಾಶ ಇಲ್ಲಿದೆ. ಉಚಿತ ವಿಮೆಯನ್ನು ಹೇಗೆ ಪಡೆಯುವುದು ಎಂದು ತಿಳಿದುಕೊಳ್ಳೋಣ.
ಎಲ್ಪಿಜಿ ಗ್ಯಾಸ್ ಸಿಲಿಂಡರ್ನಲ್ಲಿ ಗ್ರಾಹಕರಿಗೆ ವೈಯಕ್ತಿಕ ಅಪಘಾತದ ಕವರ್ ಸಿಗುತ್ತದೆ. ಇದರಲ್ಲಿ 50 ಲಕ್ಷ ರೂ.ವರೆಗೂ ಇನ್ಸ್ಯುರೆನ್ಸ್ ಇರುತ್ತದೆ.
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವವರು ಉಚಿತ ವಿಮೆಯನ್ನು ಪಡೆಯಬಹುದು. ಕ್ರೆಡಿಟ್ ಕಾರ್ಡ್ ಕಂಪನಿಗಳು 50 ಲಕ್ಷ ರೂ.ವರೆಗೆ ಉಚಿತ ವಿಮೆಯನ್ನು ನೀಡುತ್ತವೆ. ಇದಕ್ಕಾಗಿ ನೀವು ಕಾರ್ಡ್ ಬಳಸುವುದನ್ನು ಮುಂದುವರಿಸಬೇಕು. ಬ್ಯಾಂಕ್ ಡೆಬಿಟ್ ಕಾರ್ಡ್‌ಗಳಲ್ಲಿ ಉಚಿತ ವಿಮಾ ಸೌಲಭ್ಯವೂ ಇದೆ. ನೀವು ಇಲ್ಲಿ ಪಡೆಯುವ ಲಾಭವು ಕಾರ್ಡ್ ಆಧಾರದ ಮೇಲೆ ಬದಲಾಗುತ್ತದೆ.
ಟೆಲಿಕಾಂ ದೈತ್ಯ ಏರ್‌ಟೆಲ್ ವಿವಿಧ ರೀಚಾರ್ಜ್ ಯೋಜನೆಗಳಲ್ಲಿ ಉಚಿತ ವಿಮಾ ಸೌಲಭ್ಯಗಳನ್ನು ನೀಡುತ್ತಿದೆ. ನೀವು 4 ಲಕ್ಷ ರೂ.ವರೆಗೆ ವಿಮೆ ಪಡೆಯಬಹುದು. ನೀವು ರೀಚಾರ್ಜ್ ಮಾಡುವಾಗಲೆಲ್ಲಾ ಈ ಪ್ರಯೋಜನವು ಬರುತ್ತಲೇ ಇರುತ್ತದೆ.
ಇದಲ್ಲದೆ, ಇಪಿಎಫ್‌ಒ ತನ್ನ ಚಂದಾದಾರರಿಗೆ ಉಚಿತ ವಿಮೆಯನ್ನು ಸಹ ನೀಡುತ್ತದೆ. ಇದರಲ್ಲಿ 6 ಲಕ್ಷ ರೂ.ವರೆಗೆ ಉಚಿತ ವಿಮೆ ಪಡೆಯಬಹುದು.
ಇದನ್ನು ಓದಿ: ನಿಮ್ಮ ಪಾನ್ ಕಾರ್ಡ್‌ನಲ್ಲಿನ ವಿವರಗಳು ತಪ್ಪಾಗಿವೆಯೇ..? ಅಗಾದರೆ ಮನೆಯಲ್ಲೇ ಈ ಕೆಲಸ ಮಾಡಿ ಸರಿಪಡಿಸಿಕೊಳ್ಳಿ..?