ರಾಜ್ಯದಲ್ಲಿ ವರುಣಾರ್ಭಟ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಸೆ.9ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದ್ದು, ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.
ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದಿನ 5 ದಿನ ಹೆಚ್ಚಾಗಲಿದೆ. ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾತ್ರಿ ಸುರಿದ ಮಳೆಗೆ ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 29-20, ಮಂಗಳೂರು: 29-24, ಶಿವಮೊಗ್ಗ: 29-21, ಬೆಳಗಾವಿ: 28-21, ಮೈಸೂರು: 31-21, ಮಂಡ್ಯ: 31-21, ಕೊಡಗು: 26-18, ರಾಮನಗರ: 31-21, ಹಾಸನ: 28-19, ಚಾಮರಾಜನಗರ: 31-21, ಚಿಕ್ಕಬಳ್ಳಾಪುರ: 29-20, ಕೋಲಾರ: 29-21, ತುಮಕೂರು: 29-21, ಉಡುಪಿ: 29-24, ಕಾರವಾರ: 29-26, ಚಿಕ್ಕಮಗಳೂರು: 26-19, ದಾವಣಗೆರೆ: 30-22, ಚಿತ್ರದುರ್ಗ: 31-21, ಹಾವೇರಿ: 30-22, ಬಳ್ಳಾರಿ: 33-23, ಗದಗ: 31-22, ಕೊಪ್ಪಳ: 32-23, ರಾಯಚೂರು: 33-24, ಯಾದಗಿರಿ: 33-24, ವಿಜಯಪುರ: 31-22, ಬೀದರ್: 29-22, ಕಲಬುರಗಿ: 32-23, ಬಾಗಲಕೋಟೆ: 32-23 ಡಿಗ್ರಿ ಸೆಲ್ಸಿಯಸ್ ಇರಲಿದೆ.