ಜೈಪುರ : ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಬಳಲುತ್ತಿರುವವರಿಗೆ 5 ಲಕ್ಷ ಪರಿಹಾರ ನೀಡುವಂತೆ ರಾಜಸ್ಥಾನ ಹೈಕೋರ್ಟ್ ಆದೇಶ ಹೊರಡಿಸಿದ್ದು, ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಸಬಿನಾ, ಎಂ.ಕೆ.ವ್ಯಾಸ್ ಅವರು ವಕೀಲ ಸಿದ್ದಾರ್ಥ್ ಜೈನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಆಧಾರಿಸಿ ಈ ಆದೇಶ ಹೊರಡಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಸೋಂಕು ರೋಗಿಗಳ ದೇಹದ ಯಾವುದಾದರೊಂದು ಭಾಗವನ್ನು ಊನ ಮಾಡುವುದರಿಂದ ರಾಜ್ಯ ಸರ್ಕಾರವು ಪರಿಹಾರ ರೂಪದಲ್ಲಿ 5 ಲಕ್ಷ ರೂಪಾಯಿಗಳನ್ನು ನೀಡಬೇಕೆಂದು ವಕೀಲ ಸಿದ್ದಾರ್ಥ್ ಜೈನ್ ಪಿಐಎಲ್ ನಲ್ಲಿ ಉಲ್ಲೇಖಿಸಿದ್ದು, ಬ್ಲ್ಯಾಕ್ ಫಂಗಸ್ ಸೋಂಕಿನ ನಿಯಂತ್ರಣಕ್ಕೆ ನೀಡುವ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು ಅದಕ್ಕೂ ಕಡಿವಾಣ ಹಾಕಬೇಕೆಂದು ಕೋರಿದ್ದರು.
ಬ್ಲ್ಯಾಕ್ ಫಂಗಸ್ ಈಗಾಗಲೇ ಗಾಳಿಯಲ್ಲಿ ಬೆರೆತು ಹೋಗಿದ್ದು ಮೂಗಿನ ಮೂಲಕ ಪ್ರವೇಶಿಸಿ ಕಣ್ಣು ಹಾಗೂ ದೇಹದ ಇತರ ಭಾಗಗಳಿಗೆ ಪ್ರವೇಶಿಸುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದು, ಈ ಸೋಂಕು ಹೆಚ್ಚಾಗಿ ಕೊರೊನಾದಿಂದ ಗುಣಮುಖರಾದವರಲ್ಲಿ ಕಂಡು ಬರುತ್ತದೆ ಎನ್ನಲಾಗಿದೆ.