ತೂಕ ಹೆಚ್ಚಾದ್ರೆ ಸಾಕಷ್ಟು ಸಮಸ್ಯೆಗಳಾಗುತ್ತವೆ. ಬೊಜ್ಜಿನ ತೊಂದರೆ ಕಾಣಿಸಿಕೊಳ್ಳಲು ಪ್ರಮುಖ ಕಾರಣ ನಮ್ಮ ಜೀವನ ಶೈಲಿ. ಆಹಾರ ಪದ್ಧತಿಯಿಂದಲೂ ಅಧಿಕ ತೂಕದ ಸಮಸ್ಯೆಯಿಂದ ಸಾಕಷ್ಟು ಜನರು ಬಳಲುವಂತಾಗಿದೆ. ಒಂದೇ ಸ್ಥಳದಲ್ಲಿ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವುದು ಬೊಜ್ಜಿಗೆ ಮುಖ್ಯ ಕಾರಣ. ತೂಕ ಏಕೆ ಹೆಚ್ಚಾಗುತ್ತಿದೆ ಎಂಬುದನ್ನು ತಿಳಿದುಕೊಂಡರೆ ಅದನ್ನು ಇಳಿಸಲು ಪ್ರಯತ್ನ ಮಾಡಬಹುದು. ಥೈರಾಯ್ಡ್: ನಿಮಗೇನಾದ್ರೂ ಥೈರಾಯ್ಡ್ ಸಮಸ್ಯೆಯಿದ್ದರೆ ತೂಕ ಹೆಚ್ಚಾಗುವ ಅಪಾಯವಿರುತ್ತದೆ. ಥೈರಾಯ್ಡ್‌ನಿಂದ ನಿಮ್ಮ ಚಯಾಪಚಯ ಕ್ರಿಯೆ ದುರ್ಬಲಗೊಳ್ಳುತ್ತದೆ. ಇದರಿಂದಾಗಿ ದೇಹದಲ್ಲಿ ತೂಕವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಥೈರಾಯ್ಡ್‌ಗೆ ತಕ್ಷಣವೇ ಚಿಕಿತ್ಸೆ ಪಡೆಯಿರಿ. ಮಧುಮೇಹ: ಸಕ್ಕರೆ ಕಾಯಿಲೆ ಕೂಡ ತೂಕ ಹೆಚ್ಚಿಸುತ್ತದೆ. ಸಕ್ಕರೆ ಕಾಯಿಲೆ ಇರುವವರಲ್ಲಿ ನಿರಂತರವಾಗಿ ತೂಕ ಹೆಚ್ಚಾಗುತ್ತದೆ. ಇಂತಹ ರೋಗಿಗಳು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಒತ್ತಡ : ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಜನರಿಗೆ ಒತ್ತಡವೂ ಹೆಚ್ಚಾಗುತ್ತಿದೆ. ಇದು ತೂಕವನ್ನು ಹೆಚ್ಚಿಸುತ್ತದೆ. ಹಾಗಾಗಿ ಒತ್ತಡವನ್ನು ನಿವಾರಿಸಿಕೊಂಡು ರಿಲ್ಯಾಕ್ಸ್ ಆಗಿರಲು ಪ್ರಯತ್ನಿಸಿ. ಒತ್ತಡ ನಿವಾರಣೆಗಾಗಿ ಯೋಗಾಸನ ಮಾಡಬಹುದು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 10 ನಿಮಿಷಗಳ ಕಾಲವಾದರೂ ವ್ಯಾಯಾಮ ಹಾಗೂ ಪ್ರಾಣಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ಚಯಾಪಚಯ ಸಮಸ್ಯೆ: ಚಯಾಪಚಯ ಕ್ರಿಯೆ ಸರಿಯಾಗಿ ಆಗದೇ ಇದ್ದರೆ ಬೊಜ್ಜು ಬೆಳೆಯಲಾರಂಭಿಸುತ್ತದೆ. ಹಾಗಾಗಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಎಣ್ಣೆಯುಕ್ತ ಆಹಾರ : ಕರಿದ ಪದಾರ್ಥಗಳು, ಆಯ್ಲಿ ಫುಡ್ ಸೇವನೆ ಕೂಡ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂತಹ ಆಹಾರಗಳಿಂದ ನೀವು ದೂರವಿದ್ದರೆ ತೂಕ ಹೆಚ್ಚಾಗದಂತೆ ಕಾಳಜಿ ವಹಿಸಬಹುದು.
ತೂಕ ಹೆಚ್ಚಿಸುತ್ತೆ ಈ 5 ಪ್ರಮುಖ ಕಾರಣಗಳು..!
ತೂಕ ಹೆಚ್ಚಾದ್ರೆ ಸಾಕಷ್ಟು ಸಮಸ್ಯೆಗಳಾಗುತ್ತವೆ. ಬೊಜ್ಜಿನ ತೊಂದರೆ ಕಾಣಿಸಿಕೊಳ್ಳಲು ಪ್ರಮುಖ ಕಾರಣ ನಮ್ಮ ಜೀವನ ಶೈಲಿ. ಆಹಾರ ಪದ್ಧತಿಯಿಂದಲೂ ಅಧಿಕ ತೂಕದ ಸಮಸ್ಯೆಯಿಂದ ಸಾಕಷ್ಟು ಜನರು ಬಳಲುವಂತಾಗಿದೆ. ಒಂದೇ ಸ್ಥಳದಲ್ಲಿ ಕುಳಿತು ಗಂಟೆಗಟ್ಟಲೆ ಕೆಲಸ…
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.