ಬೆಂಗಳೂರು: ರಾಜ್ಯದಲ್ಲಿ ಇಂದು 48,905 ನೂತನ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 36,54,413ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕರೋನ ಸೋಂಕಿನಿಂದಾಗಿ ಇಂದೇ 39 ಜನರು ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 38705ಕ್ಕೆ ಏರಿಕೆಯಾಗಿದ್ದು, ಸದ್ಯ ಶೇ.22.51ರಷ್ಟು ಪಾಸಿಟಿವಿಟಿ ದರವಿದ್ದು, ರಾಜ್ಯಾದ್ಯಂತ 3,57,909 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇಲಾಖೆ ಬುಲೆಟಿನ್ ನಲ್ಲಿ ಮಾಹಿತಿ ನೀಡಿದೆ.
ಜಿಲ್ಲಾವಾರು ಕರೋನ ಅಪ್ಡೇಟ್ಸ್:
ಬೆಂ.ನ.-22,427, ಬೆಂ.ಗ್ರಾ.-828, ಬೀದರ್-377, ಚಾಮರಾಜನಗರ-917, ಚಿಕ್ಕಬಳ್ಳಾಪುರ-734, ಬಾಗಲಕೋಟೆ-610, ಬಳ್ಳಾರಿ-1,141, ಬೆಳಗಾವಿ-791, ಚಿಕ್ಕಮಗಳೂರು-251, ಚಿತ್ರದುರ್ಗ-445, ದ.ಕ.-888, ದಾವಣಗೆರೆ-514, ಧಾರವಾಡ-1,523, ಗದಗ-318, ಹಾಸನ-2,016, ಹಾವೇರಿ-297, ಕೊಡಗು-939, ಕೋಲಾರ-1,547, ಕೊಪ್ಪಳ-279, ಮಂಡ್ಯ-2,186, ಮೈಸೂರು-2,797, ರಾಮನಗರ-187, ಶಿವಮೊಗ್ಗ-444, ತುಮಕೂರು-2,645, ಉಡುಪಿ-1,392, ಉ.ಕ.-747, ರಾಯಚೂರು-276, ಕಲಬುರಗಿ-1,007, ವಿಜಯಪುರ-212, ಯಾದಗಿರಿ-170.