ನವದೆಹಲಿ : ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಭಾರತದಲ್ಲಿ ಮತ್ತೆ 43 ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಈ ಆಪ್ ಗಳು ದೇಶದ ಸಾರ್ವಭೌಮತ್ವ, ಭದ್ರತೆಗೆ ಮಾರಕವಾಗಿವೆ ಎಂಬ ಕಾರಣದಿಂದ ಕೇಂದ್ರ ಸರ್ಕಾರದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಅಲಿ ಸಪ್ಲಾಯರ್ಸ್, ಅಲಿಬಾಬಾ ವರ್ಕ್ ಬೆಂಚ್, ಅಲಿ ಎಕ್ಸ್ ಪ್ರೆಸ್, ಅಲಿಪೇ ಕ್ಯಾಶಿಯರ್, ಸ್ನಾಕ್ ವಿಡಿಯೋ, ಫ್ರೀ ಡೇಟಿಂಗ್ ಆಪ್, ಎಂ ಜಿ ಟಿವಿ, ಮ್ಯಾಂಗೋ ಟಿವಿ ಸೇರಿದಂತೆ 43 ಆಪ್ ಗಳನ್ನು ನಿಷೇಧಿಸಲಾಗಿದೆ.
ಈ ಹಿಂದೆ ಕೇಂದ್ರ ಸರ್ಕಾರವು ಜೂನ್ 29, 2020 ರಂದು 59 ಮೊಬೈಲ್ ಅಪ್ಲಿಕೇಶನ್ ಗಳು ಮತ್ತು ಸೆಪ್ಟೆಂಬರ್ 2, 2020 ರಂದು ಪಬ್ ಜಿ ಸೇರಿ 118 ಚೀನಿ ಆಪ್ ಗಳನ್ನು ನಿಷೇಧಿಸಲಾಗಿತ್ತು.
Union Ministry of Electronics and IT blocks access to 43 mobile apps saying these apps are engaging in activities which are prejudicial to sovereignty and integrity of India, defence of India, the security of the state and public order.@GoI_MeitY pic.twitter.com/GIxfgjVPx7
— Live Law (@LiveLawIndia) November 24, 2020




